ನೇಹಾ ಹಿರೇಮಠ ಮನೆಗೆ ದಿಂಗಾಲೇಶ್ವರ ಶ್ರೀ.ಕುಟುಂಬಸ್ಥರ ಆಕ್ರಂದನ ನೋಡಿ ಬಿಕ್ಕಿ ಬಿಕ್ಕಿ ಅತ್ತ ದಿಂಗಾಲೇಶ್ವರ ಶ್ರೀ.
ಹುಬ್ಬಳ್ಳಿ:- ಕೊಲೆಯಾದ ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ ದಿಂಗಾಲೇಶ್ವರ ಶ್ರೀಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಮೂಲಕ ಅವರೇ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು.
ನೇಹಾ ಹಿರೇಮಠ ಅವರ ತಂದೆ ತಾಯಿ ನನ್ನ ಮಠಕ್ಕೆ ಬರುತ್ತಿದ್ದರು. ಅವರ ಜೊತೆಗೆ ಈ ನೇಹಾನೂ ಬರುತ್ತಿದ್ದಳು.ಅವಳ ಟೈಲೆಂಟ್ ನೋಡಿ ನೀನು ಐಎಎಸ್ ಮಾಡು ಅಂತಾ ಹೇಳೆದ್ದೇ.ಆದರೆ ಅವಳಿಗೆ ಇವತ್ತು ಹೀಗಾಗಿದೆ ಅಂತಾ ಕಣ್ಣೀರು ಹಾಕಿದರು.
ಅಲ್ಲದೇ ದೇಶದಲ್ಲಿ ಇಂತಹ ಘಟನೆಗಳಿಗೆ ಕಠಿಣ ಕಾನೂನು ಜಾರಿಗೆ ಬರಬೇಕೆಂದು ಒತ್ತಾಯಿಸಿದರು.