ಮದುವೆ ಹಾಗೂ ಬರ್ತಡೆ ಸಂಭ್ರಮದಲ್ಲಿದ್ದ ನಾಲ್ವರ ಭರ್ಬರ ಹತ್ಯೆ: ಬೆಚ್ಚಿಬಿದ್ದ ಅವಳಿ ನಗರದ ಜನ್ರು*

Share to all

*ಮದುವೆ ಹಾಗೂ ಬರ್ತಡೆ ಸಂಭ್ರಮದಲ್ಲಿದ್ದ ನಾಲ್ವರ ಭರ್ಬರ ಹತ್ಯೆ: ಬೆಚ್ಚಿಬಿದ್ದ ಅವಳಿ ನಗರದ ಜನ್ರು*

ಗದಗ: ಮಲಗಿದಲ್ಲೇ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆಯಾದ ಘಟನೆ ನಗರದ ನಗರದ ದಾಸರ ಓಣಿಯಲ್ಲಿ ನಡೆದಿದೆ. ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿ ನಾಲ್ಕು ಜನರ ಭೀಕರವಾಗಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ(27) ಉಪಾಧ್ಯಕ್ಷೆ ಸಹೋದರ ಪರಶುರಾಮ ಹಾದಿಮನಿ (55), ಪತ್ನಿ ಲಕ್ಷ್ಮೀ (45) ಇನ್ನು 16 ವರ್ಷದ ಪುತ್ರಿ ಆಕಾಂಕ್ಷಾ ಕೊಲೆಯಾದವರು.

ಈ ಕೊಲೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಬರ್ತಡೆ ಸಂಭ್ರಮ ಮುಗಿಸಿ ರಾತ್ರಿ 1ನೇ ಮಹಡಿಯ ಕೊಣೆಯಲ್ಲಿ ಮಲಗಿದ್ದರು. ರಾತ್ರಿ 2 ರಿಂದ 3 ಗಂಟೆ ಸುಮಾರಿಗೆ ಬಂದ ದುಷ್ಕರ್ನಿಗಳು ಮನಬಂದಂತೆ ಹತ್ಯೆಗೈದು, ಮಾರಕಾಸ್ತ್ರ ಚರಂಡಿಯಲ್ಲಿ ಎಸೆದು ಹೋಗಿದ್ದಾರೆ. ಮೃತ ಪರಶುರಾಮ್ ಹಾಗೂ ಅವರ ಪತ್ನಿ, ಮಗಳು ಈ ಮೂವರು ಕೊಪ್ಪಳ ಮೂಲದವರು. ಎರಡು ದಿನಗಳ ಹಿಂದೆ ಅಂದ್ರೆ ದಿನಾಂಕ 17 ರಂದು ಮೃತ ಕಾರ್ತಿಕ್ ಬಾಕಳೆ ನ ಮದುವೆ ಫಿಕ್ಸ್ ಮಾಡುವ ಕಾರ್ಯಕ್ರಮ ಆಗಿತ್ತು. ಬರುವ 25 ರಂದು ಸಕ್ಕರಿ ಕಾರ್ಯಕ್ಕೆ ಭರ್ಜರಿ ಸಿದ್ದತೆ ನಡೆಸಿದ್ದರು. ಇನ್ನು ಮೃತ ಲಕ್ಷ್ಮೀ ಬರ್ತಡೆ ಇದ್ದ ಕಾರಣ, ನಿನ್ನೆ ರಾತ್ರಿ ಎಲ್ಲರೂ ಬರ್ತಡೆ ಆಚರಿಸಿದ್ದಾರೆ‌.

ರಾತ್ರಿ ಬಾಗಿಲು ಬಡಿದ ಸದ್ದು ಮಾಡಿದ್ರು. ನಾವು ತೆಗೆಯಲಿಲ್ಲ. ಮೇಲೆ ಸದ್ದು ಕೇಳಿ ಪ್ರಕಾಶ್ ಹಾಗೂ ಸುನಂದಾ ಬಾಕಳೆ ಅನುಮಾನಗೊಂಡು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರಿಗೆ ಫೋನ್ ಮಾಡ್ತಾಯಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಾಗಿಲು ತೆಗೆದಿದ್ರೆ ನಮ್ಮನ್ನು ಕೊಲೆ ಮಾಡುತ್ತಿದ್ದರು ಎಂದು ಮನೆ ಮಾಲೀಕ‌ ಪ್ರಕಾಶ್ ಬಾಕಳೆ ಹೇಳಿಕೆ ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದು, ಶ್ವಾನದಳ, ಫಾರಿನ್ ಸಿಕ್ ತಂಡಗಳಿಂದ ಇಂಚಿಂಚು ಪರಿಶೀಲನೆ ನಡೆಸಲಾಗುತ್ತಿದೆ.

ಮಾಧ್ಯಮಗಳಿಗೆ ಎಸ್ಪಿ, ಬಿ.ಎಸ್. ನೇಮಗೌಡ ಪ್ರತಿಕ್ರಿಯೆ ನೀಡಿದರು‌. ಮಧ್ಯರಾತ್ರಿ ನಾಲ್ಕು ಜನರಾದ ಪ್ರಕಾಶ ಬಾಕಳೆ ಮಗ ಕಾರ್ತಿಕ್, ಸಂಬಂಧಿಕರಾದ ಪರಶುರಾಮ್, ಲಕ್ಷ್ಮೀ, ಆಕಾಂಕ್ಷಾ ಹತ್ಯೆ ಆಗಿದೆ. ಕುಟುಂಬಸ್ಥರು ಹೇಳುವ ಪ್ರಕಾರ ರಾತ್ರಿ 2 ರಿಂದ 3 ಗಂಟೆ ಆಗಿದೆ ಎನ್ನಲಾಗಿದೆ. ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವುದು ಕಂಡು ಬರುತ್ತಿದೆ. ಯಾರು ಎಂಬುದು ಗೊತ್ತಾಗಿಲ್ಲ. ಪರಿಶೀಲನೆ ಮುಂದುವರೆದಿದೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿ, ಆದಷ್ಟು ಬೇಗ ದಸ್ತಗಿರಿ ಮಾಡುತ್ತೇವೆ. ಕುಟುಂಬಸ್ಥರು ಹೇಳುವ ಪ್ರಕಾರ ರಾತ್ರಿ ಬಾಗಿಲು ಬಡೆದರೂ ತೆಗೆದಿಲ್ಲ. ಆದರೆ ಹೊರಗಡೆ ಬಂದು ನೋಡಿದಾಗ 2 ರೂಮ್ ನಲ್ಲಿ ಹತ್ಯೆ ಆಗಿತ್ತು.ಈ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಟೆರೇಸ್ ನಿಂದ ಬಂದಿದ್ದಾರೆ ಎನ್ನಲಾಗುತ್ತಿದ್ದು, ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

*ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ರಿಂದ ಮೃತರ ಕುಟುಂಬಸ್ಥರಿಗೆ ಸಾಂತ್ವನ*
ಇನ್ನು ಘಟನಾ ಸ್ಥಳಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಚಿವರ ಮುಂದೆ ಅಳಲು ತೋಡಿಕೊಂಡ ಕುಟುಂಬಸ್ಥರು, ಆರೋಪಿಗಳನ್ನು ಬೇಗ ಪತ್ತೆ ಹಚ್ಚುವಂತೆ ಎಸ್.ಪಿ ಅವರಿಗೆ ಹೇಳಿ ಎಂದು ಕುಟುಂಬಸ್ಥರು ಮನವಿ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಅಮಾನುಷ ಘಟನೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ. ಯಾವ ಕಡೆಯಿಂದ ಎಂಟ್ರಿ ಆದ್ರು? ಯಾರು ಆ ಗುನ್ನೆ ಮಾಡಲು ಬಂದಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡ್ತಿದ್ದಾರೆ. ಅಮಾನವೀಯ ಘಟನೆಗೆ, ಈ ಕೃತ್ಯಕ್ಕೆ ಕಾರಣರಾದವರು ಮನುಷ್ಯರಂತೆ ವರ್ತನೆ ಮಾಡಿಯೇ ಇಲ್ಲ. ಪೊಲೀಸ್ ತನಿಖೆ ಗಂಭೀರವಾಗಿ ನಡೆಯುತ್ತೆ. ಆದಷ್ಟು ಬೇಗ ಆರೋಪಗಳನ್ನು ಪತ್ತೆ ಹಚ್ಚುವ ಕೆಲಸ ಮಾಡ್ತೆವಿ. ನಾವು ಕುಟುಂಬಸ್ಥರ ಜೊತೆ ಧೀರ್ಘ ಚರ್ಚೆ ಮಾಡಿಲ್ಲ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೆ ಇದ್ದಾರೆ. ಈ ಬಗ್ಗೆ ವಿಚಾರ ಮಾಡುವುದಾಗಲಿ, ಕೇಳುವ ಸಂದರ್ಭ ಇದಲ್ಲ‌. ಇದನ್ನು ಗಂಭೀರವಾಗಿ ಸರ್ಕಾರ ತನಿಖೆ ಮಾಡುತ್ತದೆ. ಗುನ್ನೆದಾರರನ್ನು ಪತ್ತೆ ಹಚ್ಚಲು ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳುತ್ತೆವೆ. ಹೊಸ ಟೆಕ್ನಾಲಜಿ, ಶ್ವಾನದಳ ಇತ್ಯಾದಿ ಮೂಲಕ ಪತ್ತೆ ಹಚ್ಚಲು ಎಸ್.ಪಿ ಅವರಿಗೆ ಹೇಳುತ್ತೆನೆ. ವಿಕೃತ ಮನಸ್ಸುಗಳ ಕೃತ್ಯ ಇವು. ಇವೆಲ್ಲಾ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ. ಅವುಗಳ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಸಚಿವ ಎಚ್.ಕೆ ಪಾಟೀಲ ಹೇಳಿಕೆ ನೀಡಿದರು.

*ಘಟನಾ ಸ್ಥಳಕ್ಕೆ ಐಜಿಪಿ ಭೇಟಿ*
ಕೊಲೆ ನಡೆದ ಸ್ಥಳಕ್ಕೆ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪರಾಧಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸಧ್ಯ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ವಿಭಿನ್ನ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು. ಕ್ರೈಂ ಆಗಿರೋದನ್ನು ಗಮನಿಸಿದರೆ ಕಳ್ಳತನ, ಧರೋಡೆಗೆ ಬಂದಿದ್ದಲ್ಲ. ಕೊಲೆ ಉದ್ದೇಶಕ್ಕೆ ಬಂದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಮಧ್ಯರಾತ್ರಿ ಗಾಢನಿದ್ರೆ ಸಮಯ ಆಗಿದ್ದರಿಂದ ಕೊಲೆ‌ ಸಂದರ್ಭದಲ್ಲಿ ಕೂಗಾಟ ಕೇಳಿ ಬಂದಿರದ ಸಾಧ್ಯತೆ ಇಲ್ಲ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ. ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಗಳನ್ನು ಶೀಘ್ರದಲ್ಲಿ ವಶಕ್ಕೆ ಪಡೆಯಲಾಗುವುದು ಎಂದು ಐಜಿಪಿ ವಿಕಾಸಕುಮಾರ್ ಹೇಳಿದರು.

ಗದಗನಲ್ಲಿ ನಾಲ್ವರ ಹತ್ಯೆ ಪ್ರಕರಣ.
ಮೃತ ದೇಹಗಳ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮನೆಯಿಂದ ಜಿಮ್ಸ್ ಶವಗಾರಕ್ಕೆ ರವಾನಿಸಿ ಶವ ಪರೀಕ್ಷೆ ನಂತರ ಅಂತ್ಯಕ್ರಿಯೆ ಸಕಲ ಸಿದ್ದತೆ ನಡೆಸಿದ್ದರು. ನಗರದ ರೆಹಮತ್ ನಗರದ ಮುಕ್ತಿದಾಮ ದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ. ಪರಶುರಾಮ್ ಹಾಗೂ ಕುಟುಂಬಸ್ಥರ ಮೃತದೇಹ ಕೊಪ್ಪಳ ಕ್ಕೆ ರವಾನೆ ಸಾಧ್ಯತೆ ಇದೆ. ಆದ್ರೆ ಕಾರ್ತಿಕ್ ಬಾಕಳೆ ಶವ ಮಾತ್ರ ಗದಗ ಮುಕ್ತಿ ದಾಮದಲ್ಲಿ ಸಾಯಂಕಾಲ 4 ಗಂಟೆ ನಂತರ ಅಂತ್ಯಕ್ರಿಯೆ ನಡೆಯಲಿದೆ.

ಉದಯ ವಾರ್ತೆ
ಗದಗ


Share to all

You May Also Like

More From Author