*ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರಿಂದ ಬಿರುಸಿನ ಪ್ರಚಾರ*
ನವಲಗುಂದ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪರವಾಗಿ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಬಿರುಸಿನ ಪ್ರಚಾರ ನಡೆಸಿದರು.
ನವಲಗುಂದ ಕ್ಷೇತ್ರದ ತುಪ್ಪದಕುರಟ್ಟಿ, ನಾವಳ್ಳಿ, ಕಿತ್ತೂರು, ಅಡ್ನೂರ, ಇಬ್ರಾಹಿಂಪುರ, ಹಳ್ಳಿಕೇರಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನಿ ಮಾಡುವ ಜೊತೆಗೆ ಪ್ರಲ್ಹಾದ ಜೋಶಿಯವರನ್ನ ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಸಲು ಪ್ರತಿಯೊಬ್ಬ ಕಾರ್ಯಕರ್ತರು ಪಣತೊಡುವಂತೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಕರೆ ನೀಡಿದರು.
ತಾಲೂಕಿನ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡ್ರ, ಷಣ್ಮುಖ ಗುರಿಕಾರ, ಸಿದ್ಧನಗೌಡ ಪಾಟೀಲ, ಪಾಲಾಕ್ಷಿಗೌಡ ಪಾಟೀಲ, ಜಕ್ಕನಗೌಡ್ರ, ಪ್ರಕಾಶ, ಶ್ರೀಶೈಲ ಮೂಲಿಮನಿ, ರವಿಕುಮಾರ ಸವದತ್ತಿ, ತಹಶೀಲ್ದಾರ, ಕುಬೇರಪ್ಪ, ಮುದಿಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.