ಮಳೆಗಾಲಕ್ಕೂ ಮುನ್ನ ಅಲಟ್೯ ಆದ ಮಹಾನಗರ ಪಾಲಿಕೆ.ಭರದಿಂದ ಸಾಗುತ್ತಿದೆ ನಾಲಾ ಸ್ವಚ್ಛತಾ ಕಾರ್ಯ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಲಯ ಕಚೇರಿಯ ಕೆಲವು ವಾರ್ಡುಗಳಲ್ಲಿ ನಾಲಾಗಳು ಕಸ ಕಡ್ಡಿಗಳಿಂದ ತುಂಬಿ ಮಳೆಗಾಲದಲ್ಲಿ ನೀರು ರಸ್ತೆಗಳಿಗೆ ಹಾಗೂ ಮನೆಗಳಿಗೆ ನುಗ್ಗುವ ಸಂಭವವಿರುವ ಕಾರಣ ಪಾಲಿಕೆಯ ಆಯುಕ್ತರು ಮಳೆ ಮುಂಜಾಗ್ರತಾ ಕುರಿತು ಕರೆದ ಸಭೆಯಲ್ಲಿ 15ದಿನಗಳೊಳಗೆ ಎಲ್ಲಾ ನಾಲಾ ಗಳನ್ನು ಸ್ವಚ್ಚ ಮಾಡುವಂತೆ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಅವರ ನಿರ್ದೇಶನದಂತೆ ಎಲ್ಲಾ ವಲಯ ಸಹಾಯಕ ಆಯುಕ್ತರು ಅಲೆರ್ಟ ಆಗಿದ್ದಾರೆ.
*ನವನಗರದಲ್ಲಿ ಸ್ವಚ್ಛತಾ ಕಾರ್ಯ*
ಹೌದು ವಲಯ ಕಚೇರಿ 4ರ ವ್ಯಾಪ್ತಿಯಲ್ಲಿರುವ EWS ಮುಖ್ಯ ನಾಲಾ ಸ್ವಚ್ಛತಾ ಕಾರ್ಯ ರಭಸದಿಂದ ನಡೆಯುತ್ತಿದ್ದು ನಾಲಾ ಗಳಿಂದ ಕಸ, ಕಡ್ಡಿ, ಪ್ಲಾಸ್ಟಿಕ್ ಗಳನ್ನು ಹೊರತಗೆಯಲಾಗುತ್ತಿದೆ.ವಲಯ ಸಹಾಯಕ ಆಯುಕ್ತರಾದ ರಮೇಶ್ ನೂಲ್ವಿಯವರ ಮೇಲ್ವಿಚಾರಣೆಯಲ್ಲಿ ಹಾಗೂ ಕಿರಿಯ ಅಭಿಯಂತರಾದ ಮಂಜುನಾಥ ದೊಡವಾಡ* ಇವರ ಮುಂದಾಳತ್ವದಲ್ಲಿ ಜೆ ಸಿ ಬಿ ಹಾಗೂ ಸ್ವಚ್ಛತಾ ಕರ್ಮಿಗಳಿಂದ ನಾಲಾ ಸ್ವಚ್ಛತಾ ಕಾರ್ಯ ಮಾಡಿಸಲಾಗುತ್ತಿದೆ.
*ಆಯುಕ್ತರಿಂದ ಸಾರ್ವಜನಿಕರಲ್ಲಿ ಮನವಿ*
ಈಗಾಗಲೇ ಮಳೆ ಬೀಳುವ ಲಕ್ಷಣಗಳು ಕಂಡುಬರುತ್ತಿದ್ದು ದಯಮಾಡಿ ಸಾರ್ವಜನಿಕರು ಕಸ, ಕಡ್ಡಿ, ಪ್ಲಾಸ್ಟಿಕ್ ಗಳನ್ನು ನಾಲಾ ಗಳಿಗೆ ಚೆಲ್ಲದೇ ಕಸವನ್ನು ಕಸದ ಗಾಡಿಗೆ ಹಾಕುವಂತೆ ಪಾಲಿಕೆಯ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಯವರು ಮನವಿ ಮಾಡಿಕೊಂಡಿದ್ದಾರೆ.
*ಶ್ಲಾಘನೆ*
ವಲಯವಾರು ನಡೆಯುತ್ತಿರುವ ನಾಲಾ ಸ್ವಚ್ಛತಾ ಕಾರ್ಯಕ್ಕೆ ವಲಯ ಸಹಾಯಕ ಆಯುಕ್ತರ, ಅಭಿಯಂತರರ ಆರೋಗ್ಯ ನಿರೀಕ್ಷಕರ ಹಾಗೂ ಸ್ವಚ್ಚತಾ ಕರ್ಮಿಗಳ ಕಾರ್ಯವನ್ನು ಆಯುಕ್ತರು ಶ್ಲಾಘಿಸಿದ್ದಾರೆ.