ನೇಹಾಳಿಗೆ 14 ಬಾರಿ ಇರಿದು ಕೊಂದ ಪಾಗಲ್ ಫಯಾಜ್. ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಸಿಕ್ರೇಟ್ ರಿವಿಲ್.
ಹುಬ್ಬಳ್ಳಿ:-ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ಭೀಕರವಾಗಿ ಹತ್ಯೆಯಾದ ನೇಹಾ ಹಿರೇಮಠ ಅವಳಿಗೆ ಫಯಾಜ್ ಚಾಕು ಹಾಕಿದ್ದು ಒಂದಲ್ಲ ಎರಡಲ್ಲ ಹದಿನಾಲ್ಕು ಬಾರಿ ಎಂದು ಮರಣೋತ್ತರ ಪರೀಕ್ಷೆಯಲ್ಲಿ ವರದಿಯಾಗಿದೆ.
ಪ್ರೀತಿ ನಿರಾಕರಿಸಿದ ನೇಹಾಳ ಹೃದಯಕ್ಕೆ ಮೊದಲು ಚಾಕು ಹಾಕಿದ ಫಯಾಜ್ ನಂತರ ಮೂವತ್ತು ಸೆಕೆಂಡಿನಲ್ಲಿ
ಹದಿನಾಲ್ಕು ಬಾರಿ ಚಾಕುವಿನಿಂದ ಇರಿದಿದ್ದಾನೆ.
ಕತ್ತಿನ ಬಳಿ ಚಾಕು ಹಾಕುತ್ತಿದ್ದಂತೆ ರಕ್ತನಾಳ ಕಟ್ ಆಗಿ ಅತಿಯಾದ ರಕ್ತಸ್ರಾವ ಆಗಿ ನೇಹಾ ಪ್ರಾಣಪಕ್ಷಿ ಹಾರಿಹೋಗಿದೆ.
ಇನ್ನುಳಿದಂತೆ ನೇಹಾ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿವೆ.