ನನ್ನ ಗುರುವಿನ ವಾಣಿಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ.ಆದರೆ ಧರ್ಮ ಯುದ್ದದಿಂದ ಹಿಂದೆ ಸರಿಯುವ ಪ್ರಶ್ನೆನೇ ಇಲ್ಲಾ ದಿಂಗಾಲೇಶ್ವರ ಶ್ರೀ.
ಹುಬ್ಬಳ್ಳಿ:-
ನನ್ನನ್ನು ಬಿಜೆಪಿಯವರೂ ಸಂಪರ್ಕಿಸಿದ್ದಾರೆ.ಕಾಂಗ್ರೆಸ್ ನವರೂ ಸಂಪರ್ಕಿಸಿದ್ದಾರೆ.ಆದರೆ ನನ್ನ ಗುರುವಿನ ವಾಣಿಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ.ಆದರೆ ಧರ್ಮ ಯುದ್ದದಿಂದ ಹಿಂದೆ ಸರಿಯಲ್ಲ ದಿಂಗಾಲೇಶ್ವರ ಶ್ರೀ ಹೇಳಿಕೆ.
ಚುನಾವಣಾ ಕಣದಿಂದ ಹಿಂದೆ ಸರಿದ ನಂತರ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು ನನ್ನ ಮೊದಲ ನಿರ್ಧಾರದಲ್ಲಿ ಅಚಲ.ಆ ಧರ್ಮ ಯುದ್ದ ಮುಂದುವರೆಯುತ್ತೆ.ನನ್ನ ಆ ನಿರ್ಧಾರ ಈಡೇರುವವರೆಗೂ ಮಾಲೆ ಹಾಕಲ್ಲಾ ಅಂತಾ ಹೇಳಿದ್ದೆ,ಈಗಲೂ ಸಹ ಅಷ್ಟೇ .
ನಾನೊಬ್ಬ ಮಠಾಧಿಪತಿ ಯಾಗಿರುವುದರಿಂದ ನನಗೆ ಹಣದ ಅವಶ್ಯಕತೆ ಇಲ್ಲಾ.ನನಗೆ ಮದುವೆ ಇಲ್ಲಾ ಮಕ್ಕಳೂ ಇಲ್ಲಾ.ಹಣದ ಅವಶ್ಯಕತೆ ಇಲ್ಲಾ.ಸ್ವಾಮೀಜಿಯನ್ನ ಚುನಾವಣೆಯಿಂದ ಹಿಂದೆ ಸರಿಸಲು ಹಣ ಕೊಟ್ಟಿದ್ದೇನೆ ಅಂತಾ ಯಾರಾದರೂ ಹೇಳಿದರೆ ಬಹಿರಂಗವಾಗಿ ಬಂದು ಹೇಳಲಿ ಎಂದು ದಿಂಗಾಲೇಶ್ವರ ಸವಾಲ್.
ಅವರ ಸೋಲನ್ನ ಅವರ ಮುಖದಲ್ಲಿಯೇ ಕಾಣಿಸುತ್ತಿದೆ.ಫೇಸ್ ಇಜ್ ಇಂಡೆಕ್ಸ್ ಆಪ್ ಮೈಂಡ್ ಎನ್ನುವಂತೆ ಅವರದಾಗಿದೆ ಅಂತಾ ಪರೋಕ್ಷವಾಗಿ ಜೋಶಿಯವರಿಗೆ ಟಾಂಗ್ ಕೊಟ್ಟ ದಿಂಗಾಲೇಶ್ವರ.