ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ವರುಣನ ಆರ್ಭಟದ ನಡುವೆಯೂ ನಡೆಯಿತು ಮತ ಭೇಟೆ*

Share to all

*ಬಿಜೆಪಿ ನಂಬಿ ಮತ ಚಲಾಯಿಸಿದಕ್ಕೆ 10 ವರ್ಷದಲ್ಲಿ ದೇಶ ಜನತೆಗೆ ಸಿಕ್ಕಿರುವುದು ಚಂಬು*
============
*ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ವರುಣನ ಆರ್ಭಟದ ನಡುವೆಯೂ ನಡೆಯಿತು ಮತ ಭೇಟೆ*
===================

ಹಗರಿಬೊಮ್ಮನಹಳ್ಳಿ, ಏಪ್ರಿಲ್‌ 22: ಕಾಂಗ್ರೆಸ್ ಎಲ್ಲ ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಮತದಾನ ಎಂದರೆ ಅಮೂಲ್ಯವಾದುದು. ದೇಶದ ಭವಿಷ್ಯ ನಿರ್ಧರಿಸುವ ಮಹತ್ವದ ಕೆಲಸ. ಇತಿಹಾಸ ಸೃಷ್ಟಿಸಿದ್ದು ಕಾಂಗ್ರೆಸ್‌. ಆದ್ದರಿಂದ ಈ ಬಾರಿ ಕೈಗೆ ಬೆಂಬಲ ನೀಡಿ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಾಂ ಅವರು ಮನವಿ ಮಾಡಿದರು.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಂಪುರ, ಹಂಪಾಪಟ್ಟಣ ಹಾಗೂ ದಶಮಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಿಸಿದೆ. ಸಾಲಮನ್ನಾದಿಂದ ಹಿಡಿದು ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅಧಿಕಾರ ಹಿಡಿಯಲು ಬಿಜೆಪಿ ಆಪರೇಷನ್‌ ಕಮಲ ಮಾಡಿತು. ಆದರೆ ಈಗ ಕಾಂಗ್ರೆಸ್‌ ಜನರ ಬೆಂಬಲದಿಂದ ಅಧಿಕಾರಕ್ಕೆ ಬಂದಿದೆ ಎಂದು ವಿವರಿಸಿದರು.

ಬಡಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಕಾಂಗ್ರೆಸ್‌ ಜಾರಿ ಮಾಡಿದೆ. ಆದರೆ ಬಿಜೆಪಿ ದೇಶವನ್ನು ದಿವಾಳಿ ಮಾಡುತ್ತಾ ಬರುತ್ತಿದೆ. ಇಂತಹ ಪಕ್ಷವನ್ನು ಬೆಂಬಲಿಸಬೇಡಿ. ಕಾಂಗ್ರೆಸ್‌ಗೆ ಮತ ನೀಡಿ ಎಂದರು.

ಅಖಂಡ ಬಳ್ಳಾರಿಯ ಧ್ವನಿಯಾಗಿ ದೆಹಲಿಯಲ್ಲಿ ಕೆಲಸ ಮಾಡಲು ಈ ಬಾರಿ ಅವಕಾಶ ನೀಡಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರು, ಹಾಗೂ ಕೆಎಂಎಫ್ ಅಧ್ಯಕ್ಷರಾದ ಶ್ರೀ ಭೀಮನಾಯ್ಕ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಕುರಿ ಶಿವಮೂರ್ತಿ, ಕೆಪಿಸಿಸಿ ವಕ್ತಾರರಾದ ಪತ್ರೆಶ್ ಹಿರೇಮಠ್, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದ್ವಾರಕೇಶ್, ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ ಮುಕಂದ ಕೊಟ್ರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರಯ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಸಂತ ಕುಮಾರ್,ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರುಮತ್ತು ಸಾರ್ವಜನಿಕ ಉಪಸ್ಥಿತರಿದ್ದರು.
===========
*ಮಳೆಯಲ್ಲೂ ಮುಂದುವರಿದ ಪ್ರಚಾರ*
ತುಕಾರಾಂ ಅವರ ಪ್ರಚಾರ ನಡೆಸುತ್ತಿದ್ದ ಪ್ರದೇಶದಲ್ಲಿ ಮಳೆಯಾಯಿತು. ಈ ಮಳೆಯ ನಡುವೆಯೂ ಅವರು ಪ್ರಚಾರ ನಿಲ್ಲಿಸದೆ ಮುಂದುವರಿಸಿದರು. ಜನರೂ ಅವರ ಭಾಷಣ ಕೇಳುತ್ತಾ ನಿಂತಿದ್ದು ಕಂಡು ಬಂತು. ಈ ವೇಳೆ ಮಾತನಾಡಿದ ತುಕಾರಾಂ ಅವರು ಮಳೆ ಬಂದು ರಾಜ್ಯದಲ್ಲಿ ಸಮೃದ್ಧಿಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಎಲ್ಲೆಡೆ ವರುಣನ ಸಿಂಚನವಾಗುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶವೂ ಸಮೃದ್ಧಿಯಾಗಲಿದೆ ಎಂದರು.

ಉದಯ ವಾರ್ತೆ
ಬಳ್ಳಾರಿ


Share to all

You May Also Like

More From Author