ಸಚಿವ ಸಂತೋಷ ಲಾಡ್ ಗೆ ನಾಲಾಯಕ ಪದ ಬಳಕೆ ವಿಚಾರ.ಸಾಮಾಜಿಕ ಜಾಲತಾಣದಲ್ಲಿ ವಿಜಯೇಂದ್ರ ವಿರುದ್ಧ ಆಕ್ರೋಶ.
ಹುಬ್ಬಳ್ಳಿ:-ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ಸಚಿವ ಸಂತೋಷ ಲಾಡ್ ಅವರಿಗೆ ನಾಲಾಯಕ ಎಂಬ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ಲಾಡ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಅಲ್ಲದೇ ವಿಜಯೇಂದ್ರ ಅವರ ನಡೆ ಖಂಡಿಸಿ ನಾಳೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ರಾಜ್ಯದಲ್ಲಿ ಸಂತೋಷ ಲಾಡ್ ಏಕೈಕ ಮರಾಠ ಸಮಾಜದ ಮುಖಂಡರು ಅಂತಹವರಿಗೆ ಅವಮಾನ ಮಾಡುವ ಕೆಲಸ ವಿಜಯೇಂದ್ರ ಮಾಡಿದ್ದಾರೆ ಅವರಿಗೊಂದು ದಿಕ್ಕಾರ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ ಜೈ ಭವಾನಿ.ಜೈ ಶಿವಾಜಿ, ಜೈ ಸಂತೋಷ ಲಾಡ್ ಎಂದು ಪೋಟೋಗಳನ್ನು ಅವರ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.