ಪಂಚಮಸಾಲಿ ಕೇವಲ ಯತ್ನಾಳ ಆಸ್ತಿ ಅಲ್ಲಾ.ಮಾತಿನಲ್ಲಿಯೇ ಯತ್ನಾಳ್ ಗೆ ಗುಮ್ಮಿದ ಕಾಶಪ್ಪನವರ್.
ಹುನಗುಂದ:-ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದೇ ಯತ್ನಾಳ್ ಕೆಲಸ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಪಂಚಮಸಾಲಿ ಕೇವಲ ಯತ್ನಾಳ್ ಆಸ್ತಿ ಅಲ್ಲ, ಯತ್ನಾಳ ಎರಡು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಅನ್ನೊದು ಗೊತ್ತು, ಯತ್ನಾಳ ಕೇವಲ ಮಾತಿನ ಶೂರ. ಸ್ವಪಕ್ಷದವರಿಗು ಹಾಗೂ ವಿಪಕ್ಷದವರಿಗೂ ತೆಗಳುತ್ತಾ ರಾಜಕೀಯ ನಡೆಸುತ್ತಾ ಇದ್ದಾರೆ ಎಂದು ಮಾತಿನಲ್ಲಿಯೇ ಯತ್ನಾಳ್ ಗೆ ಕ್ಲಾಸ್ ತೆಗೆದುಕೊಂಡರು ವಿಜಯಾನಂದ ಕಾಶಪ್ಪನವರ್.