ಬಾದಾಮಿಯ ಗುಳೇದಗುಡ್ಡ ಭಾಗದ ಪುರಾಣ ಪ್ರಸಿದ್ಧ ಕೆಲವಡಿ ಶ್ರೀ ಗುಡ್ಡದ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿದ ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ್*

Share to all

*ಬಾದಾಮಿಯ ಗುಳೇದಗುಡ್ಡ ಭಾಗದ ಪುರಾಣ ಪ್ರಸಿದ್ಧ ಕೆಲವಡಿ ಶ್ರೀ ಗುಡ್ಡದ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿದ ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ್*

ಬಾದಾಮಿ ಏ, 24: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಬಾದಾಮಿಯ ಪ್ರಸಿದ್ಧ ಶ್ರೀ ಗುಡ್ಡದ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

ನಂತರ ಕೆಲವಡಿ ಗ್ರಾಮಕ್ಕೆ ಭೇಟಿ ನೀಡಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿಕೊಂಡರು.

ದೇಶದ ಸರ್ವ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ‌ ಅಧಿಕಾರ ಹಿಡಿಯುವುದು ಮುಖ್ಯ. ನಮ್ಮ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಗಳು ಮಹಿಳೆಯರಿಗೆ ಕುಟುಂಬದ ಭಾರವನ್ನು ಇಳಿಸಿದೆ. ಗ್ಯಾರಂಟಿಗಳು ಪ್ರತಿ ತಿಂಗಳಿಗೆ ಸಾವಿರಾರು ರೂಪಾಯಿ ಬರುತ್ತಿದೆ ಎಂದು ಸಂಯುಕ್ತ ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಭೀಮಸೇನ್ ಚಿಮ್ಮನಕಟ್ಟಿ, ಹಾಗೂ ಪಕ್ಷದ ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು.

ಉದಯ ವಾರ್ತೆ
ಬಾದಾಮಿ


Share to all

You May Also Like

More From Author