ಚುನಾವಣೆ ಮುಂದೆ ಬಂತು. ಧರ್ಮಯುದ್ದ ಹಿಂದಕ್ಕೆ ಹೋಯಿತು.ಗಡಗಿ ಬಾಯಿ ಮುಚ್ಚಬಹುದು ಜನರ ಬಾಯಿ ಮುಚ್ಚಲು ಸಾದ್ಯನಾ..?
ಹುಬ್ಬಳ್ಳಿ:- ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಅಬ್ಬರಿಸಿ ಬೊಬ್ಬರಿಸಿದ ದಿಂಗಾಲೇಶ್ವರ ಸ್ವಾಮಿಗಳೇ ಎಲ್ಲಿದ್ದಾರೆ ಎಂದು ಜನ ಬಾಯಿ ಬಿಟ್ಟು ಕೇಳುವಂತಾಯತಾ ದಿಂಗಾಲೇಶ್ವರ ಸ್ವಾಮಿಗಳ ನಡೆ.
ಚುನಾವಣೆ ಘೋಷಣೆ ಆದ ಮೇಲೆ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ನೂರಾರು ಮಠಾಧೀಶರನ್ನು ಸೇರಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಹಿರಂಗವಾಗಿ ಧರ್ಮಯುದ್ಧ ಸಾರಿದ್ದ ಸ್ವಾಮಿಗಳು ಈಗ ಬಾಲೇಹೊಸೂರಿನಲ್ಲಿ ಠಿಕಾಣಿ ಹೂಡಿರುವುದು ಜನರಲ್ಲಿ ಹಲವು ಅನುಮಾನ ಮೂಡಿದ್ದು ಸ್ವಾಮಿಗಳು ಹಿಂಗ್ಯಾಕ ಮಾಡಿದರು ಅನ್ನೋ ಪ್ರಶ್ನೆ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ.
ಮೂರು ಸಾವಿರ ಮಠದಲ್ಲಿ ಸಭೆ ಸೇರಿ ಧರ್ಮಯಯದ್ದ ಸಾರಿದ ಮತ್ತು ಧಾರವಾಡದಲ್ಲಿ ಭಕ್ತರ ಸಭೆ ಕರೆದು ಚುನಾವಣೆಗೆ ನಿಲ್ಲುವ ಘೋಷಣೆ ಮಾಡಿ.ನಾಮಪತ್ರವನ್ನು ಸಲ್ಲಿಸಿ ನಂತರ ಚುನಾವಣಾ ಕಣದಿಂದ ನನ್ನನ್ನು ಹಿಂದೆ ಸರಿಸುವವರು ಈ ಭೂಮಿ ಮೇಲೆ ಹುಟ್ಟಿಲ್ಲಾ ಅಂತಾ ಹೇಳಿದವರು ಮುಂದೆ ನಾಮಪತ್ರ ವಾಪಸ್ಸು ಪಡೆದರು.
ಇದಕ್ಕೂ ಮೊದಲು ಶಿರಹಟ್ಟಿಯ ಹಿರಿಯ ಸ್ವಾಮಿಗಳು ರಾಜಕಾರಣ ಬೇಡಾ ಎಂದರೆ ಏನು ಮಾಡತೀರಿ ಅಂತಾ ಕೇಳಿದ ಪ್ರಶ್ನೆಗೆ ಮಠಗಳನ್ನು ಬಿಡತೇನಿ.ಆದರೆ ಈ ಧರ್ಮಯುದ್ದದಿಂದ ಹಿಂದೆ ಸರಿಯೋದಿಲ್ಲಾ ಅಂದಿದ್ದರು.
ಇದೆಲ್ಲದರ ಮದ್ಯೆ ಜೋಶಿ ಅವರನ್ನು ಸೋಲಿಸೋವರೆಗೂ ಮಾಲೆ ಹಾಕುವುದಿಲ್ಲಾ ಎಂದ ದಿಂಗಾಲೇಶ್ವರ ಸ್ವಾಮಿಗಳೇ ಈಗ ಎಲ್ಲಿದ್ದೀರಿ.ನಿಮ್ಮ ಧರ್ಮ ಯುದ್ದ ಎಲ್ಲಿ ಹೋಯಿತು. ಅಬ್ಬರಿಸಿ ಬೊಬ್ಬರಿಸಿ ಮಠ ಹಿಡಿದರೆ ನಿಮ್ಮನ್ನು ನಂಬಿದ ಭಕ್ತರಿಗೆ ಏನು ಉತ್ತರ ಕೊಡತೀರಿ ಸ್ವಾಮಿಗಳೇ.
ಲೋಕಭಾ ಕ್ಷೇತ್ರದಾದ್ಯಂತ ದಿಂಗಾಲೇಶ್ವರ ಸ್ವಾಮಿಗಳ ನಡೆಯ ಬಗ್ಗೆ ಹಲವು ಅನುಮಾನ ಮೂಡುವಂತಾಗಿದೆ.ಅನುಮಾನಗಳಿಗೆ ಉತ್ತರ ಕೊಡತಾರಾ ದಿಂಗಾಲೇಶ್ವರ ಶ್ರೀಗಳು.ಕಾದು ನೋಡಬೇಕಾಗಿದೆ.