ನೇಹಾ ಹತ್ಯೆ ಪ್ರಕರಣ. ಕುಟುಂಬಕ್ಕೆ ಬೆದರಿಕೆ ಹಿನ್ನೆಲೆ.ತಂದೆಗೆ ಗನ್ ಮ್ಯಾನ್.ಮನೆಗೆ ಭದ್ರತೆ.
ಹುಬ್ಬಳ್ಳಿ:- ನೇಹಾ ಹಿರೇಮಠ ಹತ್ಯೆ ನಡೆದ ಮೇಲೆ ನಮ್ಮ ಕುಟುಂಬಕ್ಕೆ ಬೆದರಿಕೆ ಇದೆ ಎಂದು ಸ್ವತ: ನೇಹಾ ತಂದೆ ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡ ಹಿನ್ನೆಲೆಯಲ್ಲಿ ಇಂದು ಸರಕಾರ ನಿರಂಜನ ಹಿರೇಮಠ ಮನೆಗೆ ಹಾಗೂ ಅವನಿಗೆ ಭದ್ರತೆ ನೀಡಿದೆ.
ಕಳೆದ 18 ರಂದು ಬಿವಿಬಿ ಕಾಲೇಜಿನಲ್ಲಿ ನೇಹಾ ಹತ್ಯೆ ನಡೆದ ಮೇಲೆ ನೇಹಾ ತಂದೆ ನಿರಂಜನ ಹಿರೇಮಠ ನಮಗೆ ಜೀವ ಬೆದರಿಕೆ ಇದೆ ಎಂದು ಸಿಎಂ ಮುಂದೆ ಹೇಳಿಕೊಂಡ ಹಿನ್ನೆಲೆಯಲ್ಲಿ ಇಂದು ಭದ್ರತೆ ಒದಗಿಸಿದ್ದಾರೆ.