ಪೋಲೀಸರ ಹಾಗೂ ಚುನಾವಣಾ ಅಧಿಕಾರಿಗಳ ನಡೆಗೆ ಖಂಡನೆ.ಬೀದಿಗಿಳಿದ ನಾಡಿನ ಪ್ರತಿಷ್ಠಿತ ಶ್ರೀಗಳು.
ಹುಬ್ಬಳ್ಳಿ:-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಂತನ ಮಂಥನ ಸಭೆಗೆ ಚುನಾವಣಾ ಅಧಿಕಾರಿಗಳು ಹಾಗೂ ಪೋಲೀಸ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ನಾಡಿನ ಪ್ರತಿಷ್ಠಿತ ಸ್ವಾಮಿಗಳು ಬೀದಿಗಿಳಿದು ಹೋರಾಟ ನಡೆಸಿದರು.
ಇಂದು ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ನಾಡಿನ ನೂರಾರು ಸ್ವಾಮಿಗಳು ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಚಿಂತನ ಮಂಥನ ಸಭೆ ಕರೆದಿದ್ದರು. ಆದರೆ ಪೋಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಸಭೆಗೆ ಅಡ್ಡಿಪಡಿಸಿದ್ದಾರೆ ಎಂದು ಸ್ವಾಮಿಗಳು ಬೀದಿಗಿಳಿದಿದ್ದಾರೆ.
ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಹುಬ್ಬಳ್ಳಿಯ ಚನ್ನಮ್ಮಾ ವೃತ್ತದಿಂದ ಸಬರಬನ್ ಪೋಲೀಸ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ವಿದ್ಯಾನಗರ ಇನಸ್ಪೆಕ್ಟರ್ ಮೇಲೆ ಕ್ರಮಕೈಕೊಳ್ಳಬೇಕೆಂದು ಪೋಲೀಸ ಆಯುಕ್ತರಿಗೆ ಮನವಿ ಸಲ್ಲಿಸಿದರು.