ದಿಂಗಾಲೇಶ್ವರರ ಮೇಲೆ ಪ್ರಕರಣ: ನನ್ನ ಮೇಲೇಕೆ ಗೂಬೆ: ಪ್ರಲ್ಹಾದ ಜೋಶಿ ಪ್ರಶ್ನೆ. ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನಮ್ಮ ಮಾತು ಕೇಳ್ತಾರಾ? ಬಿಜೆಪಿ ಸರ್ಕಾರದಲ್ಲಿ ಇದ್ದ ಅಧಿಕಾರಿಗಳೆಲ್ಲ ವರ್ಗವಾಗಿದ್ದಾರೆ ಜೋಶಿ.
ದಿಂಗಾಲೇಶ್ವರರ ಮೇಲೆ ಪ್ರಕರಣ: ನನ್ನ ಮೇಲೇಕೆ ಗೂಬೆ: ಪ್ರಲ್ಹಾದ ಜೋಶಿ ಪ್ರಶ್ನೆ. ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನಮ್ಮ ಮಾತು ಕೇಳ್ತಾರಾ? ಬಿಜೆಪಿ ಸರ್ಕಾರದಲ್ಲಿ ಇದ್ದ ಅಧಿಕಾರಿಗಳೆಲ್ಲ ವರ್ಗವಾಗಿದ್ದಾರೆ ಜೋಶಿ.
ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ವಿಚಾರದಲ್ಲಿ ನಾನು ಯಾವುದೇ ಅಧಿಕಾರಿಗಳ ಮೇಲೂ ಪ್ರಭಾವ ಬೀರಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಾನು ಪ್ರಭಾವ ಬೀರಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಅಧಿಕಾರಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇನ್ನು, ಕಾಂಗ್ರೆಸ್ ಸರ್ಕಾರ ಇರುವಾಗ ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರಾ? ಎಂದು ಪ್ರತಿಕ್ರಿಯಿಸಿದರು.
ದಿಂಗಾಲೇಶ್ವರ ಮೇಲೆ ನವಲಗುಂದ ಮತ್ತು ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಲು ನನ್ನ ಪಾತ್ರ ಏನಿಲ್ಲ. ಹುಬ್ಬಳ್ಳಿ- ಧಾರವಾಡದಲ್ಲಿ ಏನೇ ಆದರೂ ಪ್ರಲ್ಹಾದ ಜೋಶಿ ಕಾರಣ ಎನ್ನುವುದು ಕೆಲವರಿಗೆ ಪ್ರಾಕ್ಟೀಸ್ ಆಗಿಬಿಟ್ಟಿದೆ ಎಂದು ಜೋಶಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಜಿಲ್ಲೆಯಲ್ಲಿ ಬಿಜೆಪಿ ಅವಧಿಯಲ್ಲಿ ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಹಾಗಿದ್ದರೂ ನಮ್ಮ ಮೇಲೆ ಗೂಬೆ ಕೂರಿಸುವುದು ಹಾಸ್ಯಾಸ್ಪದ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.