ಹುಬ್ಬಳ್ಳಿ ಸುತ್ತಮುತ್ತ ತಂಪೆರೆದ ಮಳೆರಾಯ.ಗುಡುಗು ಸಹಿತ ಸುರಿದ ಮಳೆ.
ಹುಬ್ಬಳ್ಳಿ:- ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದು ಘಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಪುಲ್ ಖುಷ್ ಆಗಿದ್ದಾರೆ.ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.
ಕಳೆದ ಕೆಲ ದಿನಗಳಿಂದ ಮಳೆ ಮಳೆ ಎನ್ನುತ್ತಿದ್ದ ಜನರಿಗೆ ಮಳೆರಾಯ ತಣ್ಣಗಾಗಿಸಿದ್ದು ಜನ ಖುಷಿಯೋ ಖುಷಿ ಜೊತೆಗೆ ಗಾಳಿ ಮತ್ತು ಸಿಡಿಲನ ಅಬ್ಬರ ಜೋರಾಗಿತ್ತು.
ಇನ್ನೂ ಎರಡ್ಮೂರು ದಿನ ಹುಬ್ಬಳ್ಳಿ ಸುತ್ತಮುತ್ತ ಮಳೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.