ಕಲಘಟಗಿ
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರವಲಯದ ಕಬ್ಬಿನ ಹೊಲದಲ್ಲಿ ಜಗತ್ತು ಅರಿಯದ ನವಜಾತ ಶಿಸುವೊಂದನ್ನು ಬಿಟ್ಟು ಹೋದ ಘಟನೆ ಜರುಗಿದೆ.
ಮೂರು ಕೆಜಿ ತೂಕದ ಗಂಡು ಮಗುವನ್ನು ನಿನ್ನೆ ತಾಯಿಯೊಬ್ಬಳು ಕಬ್ಬಿನ ಗದ್ದೆಯಲ್ಲಿ ಜನ್ಮ ನೀಡಿ ಅಲ್ಲಿಯೇ ಬಿಟ್ಟು ಹೋದ ಪಾಪಿ ತಾಯಿ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.ತಾಯಿ ಮಗುವನ್ನು ಬಿಸಾಕಿ ಹೋದ ಮೇಲೆ ಸಾಯಂಕಾಲ ಆ ಕಂದಮ್ಮನಿಗೆ ಇರುವೆ ಕಚ್ಚಲು ಆರಂಭಿಸಿವೆ ಅವಾಗ ಒಂದು ದಿನದ ಮಗುವಿಗೆ ನೋವು ಅನ್ನುವುದು ಹೇಗೆ ಗೊತ್ತಾಗುತ್ತೇ ನೋಡಿ. ಆ ಮಗು ಅಳಲು ಪ್ರಾರಂಭ ಮಾಡುತ್ತೇ,ಮಗು ಅಳುವ ಶಬ್ಧ ಕೇಳಿ ಕಬ್ಬಿನ ಗದ್ದೆಯ ಪಕ್ಕದ ಮನೆಯವರು ಬಂದು ನೋಡಿದಾಗ ಒಂದು ದಿನದ ಕಂದಮ್ಮ. ಅವಾಗ ಆ ಮಗುವನ್ನು ತೆಗೆದುಕೊಂಡು ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿ ಪೋಲೀಸರ ಮುಖಾಂತರ ಶಿಸುಪಾಲನಾ ಕೇಂದ್ರಕ್ಕೆ ಒಯ್ದು ಬಿಟ್ಟು ಬಂದಿದ್ದಾರೆ.ಈ ಕುರಿತು ಕಲಘಟಗಿ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ
ಉದಯ ವಾರ್ತೆ ಕಲಘಟಗಿ