ಹುಬ್ಬಳ್ಳಿ:- ಅಂಜಲಿ ಹಂತಕ, ಬೈಕ್ ಕಳ್ಳ ಬುಧವಾರ ಬೆಳ್ಳಂ ಬೆಳಿಗ್ಗೆ ಅಂಜಲಿ ಮನೆಗೆ ನುಗ್ಗಿ ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದ
ಕೊಲೆ ಮಾಡಲು ಅಟೋದಲ್ಲಿ ಬಂದ ಹಂತಕ ಐದೇ ಐದು ನಿಮಿಷದಲ್ಲಿ ತನ್ನ ಕೆಲಸ ಮುಗಿಸಿ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಯಾವ ಕಡೆ ಹೋಗಬೇಕೆಂದು ತಿಳಿಯದೇ ಯಾವುದೋ ಒಂದು ಬಸ್ ಹತ್ತಿ ಮತ್ತೆ ಗಬ್ಬೂರಿನಲ್ಲಿ ಇಳಿದು ಅಲ್ಲಿಂದ ಟ್ರೇನ್ ಮೂಲಕ 8-50 ಕ್ಕೆ ಡಾವಣಗೇರಿಗೆ ಹೋಗತಾನೆ.ಅಲ್ಲಿ ಲೇಡೀಜ್ ಟಾಯಲೆಟ್ ಗೆ ಹೋಗಿದ್ದರಿಂದ ಜನರು ಹಿಡಿದು ಥಳಿಸಿದ್ದಾರಂತೆ.
ಇನ್ನೊಂದು ಮಾಹಿತಿ ಪ್ರಕಾರ ಟ್ರೇನಿನಿಂದ ಬಿದ್ದು ಸುಸೈಡಗೆ ಎತ್ನಿಸಿ ಗಾಯಗೊಂಡು ಡಾವಣಗೇರಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆತುತ್ತಿದ್ದ.ಡಾವಣಗೇರಿಯಲ್ಲಿ ಎಂಎಲ್ಸಿ ದಾಖಲಾಗಿದ್ದರಿಂದ ಅಲ್ಲಿಯ ಡಿವಾಯ್ ಎಸ್ಪಿ ಇವನ ಮುಖ ಗುರುತಿಸಿ ಹುಬ್ಬಳ್ಳಿ ಪೋಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ಸಾಯಂಕಾಲ ಹುಬ್ಬಳ್ಳಿಯಿಂದ ಡಾವಣಗೇರಿಗೆ ಹೋದ ಹುಬ್ಬಳ್ಳಿ ಪೋಲೀಸರು ಹಂತಕನನ್ನು ಕರೆ ತಂದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿದ್ದಾರೆ.
ಹುಬ್ಬಳ್ಳಿ ಪೋಲೀಸರು ಹಂತಕನನ್ನು ವಶಕ್ಕೆ ಪಡೆದ ಮೇಲೆ ಹಂತಕ ಮಾತ್ರ ಟ್ರೆನಿನಿಂದ ಬಿದ್ದೆ ಅಂತಾ ಒಂದ ಸಲ ಹೇಳಿದರೆ ಮತ್ತೊಮ್ಮೆ ಡಾವಣಗೇರಿಯಲ್ಲಿ ಜನ ಹೊಡೆದರು ಅಂತಾ ಹೇಳತಿದ್ದಾನೆ.