ಕೋಟಿಗೆ ಲಕ್ಷ ಕೊಟ್ಟರೆ..ಸರಕಾರಕ್ಕೆ ಕೋಟಿ ವಂಚನೆ.ಕೋಟಿಯ ಕ್ಯಾಲ್ಕುಲೇಟರ್ ಲೆಕ್ಕ ಬಲ್ಲವರು ಯಾರು.? ವರ್ಗಾವಣೆ ಆದರೂ ಹೋಗತಿಲ್ಲಾ ಸಾಹೇಬ್ರು..
ಹುಬ್ಬಳ್ಳಿ:-ಹೌದು ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿಯ ಲಕ್ಷ್ಮೀ ಹರಿದಾಡುವ ಕಛೇರಿಯಲ್ಲಿ ಬೆಳೆಗ್ಗೆಯಿಂದ ಸಾಯಂಕಾಲದವರೆಗೆ ಮೇಯುತ್ತಿರುವ ಏಳು ಕೋಟಿ ಸಾಹೇಬರ್ ಹಣದಾಹಕ್ಕೆ ಕಛೇರಿಯ ಸಿಬ್ಬಂದಿಗಳೇ ರೋಸಿ ಹೋಗಿದ್ದಾರೆ.ಟೇಬಲ್ ಕೆಳಗಿನ ವ್ಯವಹಾರ ಎಂದು ರೂಢ ಮಾತುಗಳು ಈ ಕಛೇರಿಯಲ್ಲಿ ಜಗಜ್ಜಾಹೀರಾಗಿಯೇ ನಡೆಯುತ್ತಿವೆ ಎಂಬುದು ಈ ಕಛೇರಿಗೆ ಭೇಟಿ ಕೊಟ್ಟಾಗ ಅರಿವಿಗೆ ಬಾರದೆ ಇರಲಾರದು.
ಈ ಕಛೇರಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ವ್ಯವಹಾರಕ್ಕೆ ರಾಜ್ಯ ಸರಕಾರ ಸ್ಟ್ಯಾಂಪ್ ಡ್ಯೂಟಿ ಫಿಕ್ಸ್ ಮಾಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ.ಆದರೆ ಸರಕಾರಕ್ಕೆ ಸಂದಾಯ ಮಾಡಬೇಕಿರುವ ಸ್ಟ್ಯಾಂಪ್ ಡ್ಯುಟಿಯನ್ನ ವಂಚಿಸಿ ಕೋಟ್ಯಾಂತರ ರೂಪಾಯಿಯನ್ನು ಸರಕಾರಕ್ಕೆ ವಂಚಿಸಬೇಕಾದರೆ ಕೋಟೆ ಸಾಹೇಬ್ರಿಗೆ ಲಕ್ಷ ಕೊಡಲೇ ಬೇಕು.ಅಷ್ಟು ಕೊಟ್ಟರೆ ಸಾಕು ಸರಕಾರಕ್ಕೆ ಕೋಟಿಗಟ್ಟಲೆ ವಂಚಿಸುವ ಪ್ರತಿಯೊಂದು ಮಗ್ಗಲುಗಳನ್ನು ಪರಿಚಯಿಸಲು ಕೋಟೆ ಸಾಹೇಬ್ರು ಹಾಗೂ ಅವರ ಕೈಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿ ನಿಮ್ಮ ಸಹಾಯಕ್ಕೆ ಬಂದು ನಿಲ್ಲುತ್ತಾರೆ.
!!!ಲಕ್ಷಕ್ಕೆ ಕಣ್ಣಿಟ್ಟ ಕೋಟಿ….!!!
ದಿನಂಪ್ರತಿ ರಾಜ್ಯ ಸರ್ಕಾರ ಬೊಕ್ಕಸಕ್ಕೆ ಹಣಕಾಸಿನ ಮೂಲಾಧಾರವಾಗಿರುವ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಲಕ್ಷ್ಮೀ ಕಛೇರಿಯಲ್ಲಿ ಕರ್ತವ್ಯಕ್ಕೆ ಸುಮಾರು ಎರಡು ವರ್ಷಗಳ ಹಿಂದೆಯೇ ಆಗಮಿಸಿದ್ದ ಆ ಸಾಹೇಬ್ರು, ಇಲ್ಲಿ ನಿತ್ಯವೂ ಸಂಗ್ರಹವಾಗುತ್ತಿರುವ ರಾಜಸ್ವದ ಮೊತ್ತ ನೋಡಿ ಹಾಗೂ ಪ್ರತಿನಿತ್ಯವೂ ಲಕ್ಷಾಂತರ ರೂಪಾಯಿಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಹಿಡಿದು ಶ್ರೀ ಸಾಮಾನ್ಯರಿಂದಲೂ ಪೀಕಲು ಸಾಧ್ಯ ಎಂದು ಮನದಟ್ಟು ಮಾಡಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿಯೇ, ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ‘ ಜನರಲ್ ಟ್ರಾನ್ಸಫರ್’ ಅಡಿಯಲ್ಲಿ ಆ ಸಾಹೇಬ್ರನ್ನು ವರ್ಗಾವಣೆ ಮಾಡಿದೆ. ಆದರೆ, ಇದರಿಂದ ವಿಚಲಿತರಾದ ಲಕ್ಷ್ಮೀ ಪುತ್ರ ಪ್ರತಿ ನಿತ್ಯ ಅನಾಯಾಸವಾಗಿ ಲಭಿಸುವ ಲಕ್ಷಾಂತರ ರೂಪಾಯಿ ಆಸೆಗಾಗಿ ತಮ್ಮ ವರ್ಗಾವಣೆಯ ವಿರುದ್ದ ‘ಕೆಎಟಿ’ಯಿಂದ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದಾರೆ ಎಂಬ ಮಾತುಗಳು ಕಚೇರಿ ಆವರಣದಲ್ಲಿ ಕೇಳಿ ಬರಲಾರಂಭಿಸಿವೆ.
ಸ್ವಹಿತಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ಹಾನಿಯುಂಟು ಮಾಡುವುದಲ್ಲದೇ ಇಡೀ ಸರ್ಕಾರಿ ವ್ಯವಸ್ಥೆಯನ್ನೆ ಭ್ರಷ್ಟಾಚಾರದಲ್ಲಿ ಮುಳುಗಿಸಲು ಮುಂದಾಗಿರುವ ಆ ಸಾಹೇಬ್ರರನ್ನು ತತಕ್ಷಣ ವರ್ಗಾವಣೆ ಮಾಡುವ ಮೂಲಕ ಶ್ರೀ ಸಾಮಾನ್ಯರಿಂದಪ್ರತಿ ನಿತ್ಯ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿರುವ ಅಧಿಕಾರಿ ವಿರುದ್ದ ಸರ್ಕಾರ ಎಚ್ಚತ್ತುಕೊಂಡು ಕೋಟ್ಯಾಂತರ ರಾಜಸ್ವ ಉಳಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.
ಏಳು ಕೋಟಿಯ ಕೋಟೆ ಕಥೆಯ ಮುಂದಿನ ಭಾಗ ವೀಕ್ಷಿಸಿ ಉದಯ ವಾರ್ತೆಯಲ್ಲಿ.