ಅಂಜಲಿ ಹಂತಕನ ವಿರುದ್ಧ ಮತ್ತೊಂದು ಕೇಸ್.ಅಪ್ರಾಪ್ತೆಗೆ ಪ್ರೀತಿಸಿ ಮೋಸ ಮಾಡಿದ ವಿಶ್ವ.
ಹುಬ್ಬಳ್ಳಿ:-ಪ್ರೀತಿ ನಿರಾಕರಿಸಿದಳು ಅನ್ನೋ ಕಾರಣಕ್ಕೆ ಅಂಜಲಿ ಕೊಲೆ ಮಾಡಿದ್ದ ವಿಶ್ವನ ವಿರುದ್ದ ಈಗ ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಕಳೆದ ಆರು ತಿಂಗಳ ಹಿಂದೆ ಪ್ರೀತಿ ನಾಟಕವಾಡಿ ಬಾಲಕಿ ಯೊಬ್ಬಳಿಗೆ ಮೋಸ ಮಾಡಿ ಬಾಕಿಯನ್ನು ನಂಬಿಸಿ ಅವರ ಮನೆಯಲ್ಲಿದ್ದ ಹಣ ಹಾಗೂ ಬಂಗಾರದ ಒಡವೆಗಳನ್ನು ಲಪಟಾಯಿಸಿರುವ ಕುರಿತು ದೂರು ದಾಖಲಾಗಿದೆ.
ಯಲ್ಲಾಪುರ ಓಣಿಯ ಬಾಲಕಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ಹಂತಕ ವಿಶ್ವನ ವಿರುದ್ಧ ಸೆಕ್ಷನ್ 420,504,506 ಅಡಿಯಲ್ಲಿ ದೂರು ದಾಖಲಾಗಿದೆ.