ಸಂಡೇ ಆದರೂ ಸಿಟಿ ರೌಂಡ್ಸ್ ಹೊಡೆದ ಕಮೀಷನರ್.ಮಳೆ ಹಾಗೂ ತೆರೆದ ಚರಂಡಿ ವೀಕ್ಷಣೆ.ಕರ್ತವ್ಯದ ಜೊತೆಗೆ ಕ್ರಿಕೆಟ್ ಆಡಿದ ಡಾ: ಈಶ್ವರ ಉಳ್ಳಾಗಡ್ಡಿ.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ: ಈಶ್ವರ ಉಳ್ಳಾಗಡ್ಡಿ ಅವರು ಹುಬ್ಬಳ್ಳಿ- ಧಾರವಾಡ ಸಿಟಿ ರೌಂಡ್ಸ್ ಹಾಕುವ ಮೂಲಕ ಮಳೆ ಹಾಗೂ ಚರಂಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು.
ಸಂಡೇ ಆದರೂ ಸಹ ಇಂದು ಬೆಂಗಳೂರಿನಿಂದ ನೇರವಾಗಿ ಹುಬ್ನಳ್ಳಿಗೆ ಬಂದು ಅಲ್ಲಿಂದ ಮಳೆ ಹಾನಿ ಮತ್ತು ಚರಂಡಿ ಸ್ವಚ್ಚತಾ ಪರಿಶೀಲನೆ ನಡೆಸಿದರು.ಅದರ ಜೊತೆ ಜೊತೆಗೆ ಹುಬ್ಬಳ್ಳಿಯ ಲೋಕಪ್ಪನ ಹಕ್ಕಲದಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಜೊತೆಗೆ ಬ್ಯಾಟ್ ಬೀಸಿ ಕ್ರಿಕೆಟ್ ಪ್ರೇಮಿಗಳನ್ನು ಹುರುದುಂಬಿಸಿದರು.
ಕರ್ತವ್ಯದ ಜೊತೆ ಜೊತೆಗೆ ಕ್ರಿಕೆಟ್ ಆಡುವ ಮೂಲಕ ಮಳೆಯಿಂದ ಏನಾದರೂ ಸಮಸ್ಯೆ ಆದರೆ ನೇರವಾಗಿ ನನಗೆ ಪೋನ್ ಮಾಡಬಹುದು ಎಂದು ಕಮೀಷನರ್ ಡಾ; ಈಶ್ವರ ಉಳ್ಳಾಗಡ್ಡಿ ಹೇಳಿದರು.