- ಪ್ರಧಾನಿಗಳೇ ಮದ್ಯ ಪ್ರವೇಶ ಮಾಡಿ ಕಾವೇರಿ ಉಳಿಸಿ ರಕ್ತದಲ್ಲಿ ಪತ್ರ ಬರೆದ ಹೋರಾಟಗಾರರು.
ಧಾರವಾಡ:-ಧಾರವಾಡದಲ್ಲಿ ಕಾವೇರಿ ನೀರಿಗಾಗಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲಾಧಿಕಾರಿ ಕಛೇರಿ ಮುಂದೆ ರಕ್ತದಲ್ಲಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಆಕ್ರೋಶವನ್ನು ವ್ಯಕ್ತಪಡಿಸಿದರು.ರಕ್ತದಿಂದ ಬರೆದ ನೂರಾರು ಪತ್ರಗಳನ್ನ ಪೋಸ್ಟ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಕಳಿಸಿದರು. ಅಲ್ಲದೇ ಕೂಡಲೇ ಪ್ರಧಾನ ಮಂತ್ರಿಗಳು ಕಾವೇರಿ ನೀರಿನ ವಿವಾದದಲ್ಲಿ ಮದ್ಯೆಸ್ಥಿಕೆವಹಿಸಿ ಬಗೆಹರಿಸುವಂತೆ ಒತ್ತಾಯಿಸಿದರು.
ಉದಯ ವಾರ್ತೆ ಧಾರವಾಡ