ಅಂಜಲಿ ಕೊಲೆ ಪ್ರಕರಣ ಸಿಐಡಿಗೆ ವಹಿಸಿದ ಹೋಮ್ ಮಿನಿಸ್ಟರ್. ಜಿ ಪರಮೇಶ್ವರ ಹೇಳಿಕೆ.
ಹುಬ್ಬಳ್ಳಿ:-ಕಳೆದ 18 ರಂದು ನಡೆದ ಅಂಜಲಿ ಕೊಲೆ ಪ್ರಕರಣವನ್ನೂ ಸಹ ಸಿಐಡಿಗೆ ಕೊಡಲಾಗುವುದು ಎಂದು ಹೋಮ್ ಮಿನಿಸ್ಟರ್ ಜಿ.ಪರಮೇಶ್ವರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಜಿ.ಪರಮೇಶ್ವರ ಅಂಜಲಿ ಕೊಲೆ ಪ್ರಕರ ಆದ ಮೇಲೆ ಇವತ್ತು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದೇನೆ. ಅಂಜಲಿ ಅಜ್ಜಿ ಜೊತೆ ಮಾತನಾಡಿದ್ದೇನೆ.
ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿಗೆ ಕೊಡಲಾಗುವುದು ಇಂದು ಸಂಜೆ ಆದೇಶ ಹೊರ ಬೀಳಲಿದೆ.ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ.ಸಿಬಿಆಯ್ ಗೆ ವಹಿಸುವುದಿಲ್ಲಾ ಎಂದು ಸಚಿವರು ಹೇಳಿದ್ದಾರೆ.