ಅಂಜಲಿ ಹತ್ಯೆ ಪ್ರಕರಣ. ಮತ್ತೊಬ್ಬ ಅಧಿಕಾರಿಯ ತಲೆದಂಡ.ಹುಬ್ಬಳ್ಳಿ ದಕ್ಷಿಣ ಉಪವಿಭಾಗ ACP ಅಮಾನತ್ತು.
ಹುಬ್ಬಳ್ಳಿ:-ಅಂಜಲಿ ಹತ್ಯೆ ಪ್ರಕರಣದಲ್ಲಿ
ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ.ಹುಬ್ಬಳ್ಳಿ ದಕ್ಷಿಣ ಉಪವಿಭಾಗ ACP ವಿಜಯ ಕುಮಾರ್ ತಳವಾರ ಅಮಾನತ್ತು ಮಾಡಲಾಗಿದೆ.
ಅಂಜಲಿ ಮತ್ತು ನೇಹಾ ಹತ್ಯೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ
ಎಸಿಪಿ ವಿಜಯ್ ಕುಮಾರ್ ಅಮಾನತ್ತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ಹುಬ್ಬಳ್ಳಿಯಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್
ಕೆಲವೇ ಕ್ಷಣಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಗೃಹ ಸಚಿವ ಪರಮೇಶ್ವರ್..
ಸುದ್ದಿಗೊಷ್ಠಿ ವೇಳೆ ಯಾರೇ ತಪ್ಪು ಮಾಡಿದರು ಯಾವುದೇ ಜಾತಿ ಮತ ನೋಡದೆ ಕ್ರಮ ತೆಗೆದುಕೊಳ್ಳುತ್ತೆವೆ ಅಂತ ಭರವಸೆ ನೀಡಿದ್ದ ಹೋಮ್ ಮಿನಿಸ್ಟರ್.
ಸುದ್ದಿಗೊಷ್ಠಿ ಮುಗಿಯುತ್ತಿದಂತೆ ಎಸಿಪಿ ವಿಜಯ್ ಕುಮಾರ್ ಅಮಾನತು ಆದೇಶ ಹೊರಬಿದ್ದಿದೆ.