ಅಂಜಲಿ ಕೊಲೆ ಪ್ರಕರಣ.ಡಿಸಿಪಿ,ಎಸಿಪಿ,ಇನಸ್ಪೆಕ್ಟರ್, ಮಹಿಳಾ ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್ ಮಾಡಿದ್ದಾಯ್ತು ಮತ್ಯಾರು..?
ಹುಬ್ಬಳ್ಳಿ:- ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಾಗೂ ಕರ್ತವ್ಯ ಲೋಪದ ಕಾರಣ ಇಟ್ಟುಕೊಂಡು ನಾಲ್ಕು ಜನರನ್ನು ಅಮಾನತ್ತು ಮಾಡಿದ್ದು ಮತ್ಯಾರು ಸಸ್ಪೆಂಡ್ ಆಗತಾರೆ ಅಂತಾ ಪೋಲೀಸರು ನಿದ್ದೆಗೆಟ್ಟು ಕಾಯುವಂತಾಗಿದೆ.
ಅಂಜಲಿ ಕೊಲೆ ಆದ ನಂತರ ಬೆಂಡಿಗೇರಿ ಪೋಲೀಸ ಠಾಣೆಯ ಇನಸ್ಪೆಕ್ಟರ್ ಸಿ.ಬಿ.ಚಿಕ್ಕೋಡಿ.ಮಹಿಳಾ ಹೆಡ್ ಕಾನ್ಸ್‌ಟೇಬಲ್ ರೇಖಾ ಅವರನ್ನು ಕಮೀಷನರ್ ರೇಣುಕಾ ಸುಕುಮಾರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದರು.
ಮೊನ್ನೆ ಡಿಸಿಪಿ ರಾಜೀವ್ ಅವರನ್ನು ಅಮಾನತ್ತು ಮಾಡಿ ಸರಕಾರ ಆದೇಶ ಮಾಡಿತ್ತು.ಇಂದು ಎಸಿಪಿ ವಿಜಯಕುಮಾರ ತಳವಾರ ಅವರನ್ನು ಸಸ್ಪೆಂಡ್ ಮಾಡಿ ಸರಕಾರ ಆದೇಶ ಮಾಡಿದೆ.
ಇನ್ನೂ ಮೂರ್ನಾಲ್ಕು ಪೋಲಿಸರನ್ನು ಸಸ್ಪೆಂಡ್ ಮಾಡಲು ಕಮೀಷನರ್ ರೇಣುಕಾ ಮೇಡಂ ಲಿಸ್ಟ್ ರೆಡಿ ಮಾಡಿದ್ದಾರಂತೆ.
ಇಂತಹ ಒಂದು ಪ್ರಕರಣದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಧಿಕಾರಿಗಳನ್ನ ಹಾಗೂ ಸಿಬ್ಬಂದಿಗಳನ್ನು ಅಮಾನತ್ತು ಮಾಡಿರುವುದು ರಾಜ್ಯದಲ್ಲಿಯೇ ಮೊದಲ ಪ್ರಕರಣ ಎನ್ನಲಾಗಿದೆ. ಇದರಿಂದ ತಪ್ಪೇ ಮಾಡದ ಅಧಿಕಾರಿಗಳ ತಲೆದಂಡ ಎಷ್ಟು ಸರಿ ಎಂದು ಪೋಲೀಸರೇ ಕೈ ಕೇ ಹಿಸುಕಿಕೊಳ್ಳುವಂತಾಗಿದೆ.
ಅಷ್ಟೇ ಅಲ್ಲದೆ ಈ ಸಾಲು ಸಾಲು ಅಮಾನತ್ತುಗಳಿಂದ ಹುಬ್ಬಳ್ಳಿಯಲ್ಲಿ ಪೋಲೀಸರ ನೈತಿಕಸ್ಥ್ಯೆರ್ಯ ಕುಗ್ಗಿಸುವ ಕೆಲಸವನ್ನ ಸರಕಾರ ಮಾಡಿತಾ ಎನ್ನುವಂತಾಗಿದೆ.