ಒಂದೇ ವೇಲ್ ಗೆ ಕೊರಳೊಡ್ಡಿದ ಪ್ರೇಮಿಗಳು.ಪತ್ನಿ ಬಿಟ್ಟು ಬೇರೊಬ್ಬನ ಪತ್ನಿಯೊಂದಿಗೆ ಲವ್ ಮಾಡಿದ್ದ ಪೋಲೀಸಪ್ಪ. ಪ್ರಿಯತಮೆಯೊಂದಿಗೆ ನೇಣಿಗೆ ಶರಣಾದ ಪೋಲೀಸ್.
ಹುಬ್ಬಳ್ಳಿ: ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಒಬ್ಬ ತನ್ನ ಪ್ರಿಯತಮೆಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಾಧರ ನಗರದಲ್ಲಿ ನಡೆದಿದೆ.
ಮಹೇಶ ಹೆಸರೂರ ಎಂಬ ಪೊಲೀಸರೇ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ದಿನಗಳ ಹಿಂದೆಯೇ ನೇಣಿಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.
ಮಹೇಶ ಹೆಸರೂರ ಅವರು ಪತ್ನಿಯನ್ನು ಬಿಟ್ಟು ಲಕ್ಷ್ಮೀ ಎಂಬ ಮಹಿಳೆಯೊಂದಿಗೆ ಲವ್ ಮಾಡಿ ಅವಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.
ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿಯೂ ಕರ್ತವ್ಯ ನಿರ್ವಹಿಸಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಪ್ರಕರಣ ದಾಖಲು ಮಾಡಿಕೊಂಡಿರುವ ಎಪಿಎಂಸಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮಕೈಕೊಂಡಿದ್ದಾರೆ.ಸ್ಥಳಕ್ಕೆ ಕಮೀಷನರ್ ರೇಣುಕಾ ಸುಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.