ಆಸ್ಪತ್ರೆಯಲ್ಲಿ ಇದ್ರೂ ಕಡಿಮೆಯಾಗದ ಅಂಜಲಿ ಹಂತಕನ ಹುಚ್ಚಾಟ. ಆಸ್ಪತ್ರೆಯಲ್ಲಿ ನಸ್೯ ಜೊತೆ ಕಿರಿಕ್ ಮಾಡಿರೋ ವಿಶ್ವ ಅಲಿಯಾಸ್ ಗೀರಿಶ್.
ಹುಬ್ಬಳ್ಳಿ:-ಅಂಜಲಿ ಹಂತಕ ವಿಶ್ವ ಅಲಿಯಾಸ್ ಗಿರೀಶನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಯೂ ಸಹ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ ಎನ್ನಲಾಗಿದೆ.ವಿಶ್ವನಿಗೆ
ನರ್ಸ್ ಟ್ರೀಟ್ ಮೆಂಟ್ ಕೊಡುವಾಗ ನಸ್೯ಗಳ ಜೊತೆ ಅಸಬ್ಯವಾಗಿ ವರ್ತಿಸಿ ಹುಚ್ಚಾಟ ಮಾಡ್ತಿದ್ದಾನಂತೆ.
ಕಿಮ್ಸ್ ಬಂಧಿಯ ಕೊಠಡಿಯಲ್ಲಿ ಇರುವ ವಿಶ್ವ ಅಲಿಯಾಸ್ ಗಿರೀಶ್ ಮಹಿಳಾ ಸಿಬ್ಬಂದಿಯೊಂದಿಗೆ
ಅನುಚಿತ ವರ್ತನೆ ಮಾಡಿದ್ದಾನೆ ಎನ್ನಲಾಗಿದ್ದು ಅವನ ಹುಚ್ಚಾಟದಿಂದ
ಆಸ್ಪತ್ರೆಯ ಸಿಬ್ಬಂದಿಗಳು ಭಯ ಭೀತರಾಗಿದ್ದಾರಂತೆ.
ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿಯಲ್ಲಿ ಕೆಲಸ ಮಾಡ್ತಿದ್ದ ಆಯಾಗೆ ಹಂತಕ ಧಮ್ಕಿ ಹಾಕಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಠಡಿಗೆ ಬಿಗಿ ಪೊಲೀಸ್ ಬಂದೋ ಬಸ್ತ ಹಾಕಿದ್ದಾರೆ.ಒಬ್ಬ ವಿಶ್ವನಿಗಾಗಿ ಏಳು ಜನ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ.
ಹೆಣ್ಮಕ್ಕಳ ವಿಷಯದಲ್ಲಿ ಕಿಮ್ಸ್ ನಲ್ಲೂ ವಿಶ್ಬ ಕಿರಿಕ್ ಮಾಡಿಕೊಂಡಿದ್ದಾನೆ ಹಂತಕ..