ಸರಳತೆಗೆ ಸಾಕ್ಷಿಯಾದ ಸಚಿವ ಸಂತೋಷ ಲಾಡ್ – ಹಿರಿಯರಿಗೆ ಹೇಗೆ ಗೌರವ ಕೊಡಬೇಕು, ಕಾಣಬೇಕು ಎಂಬೋದನ್ನ ಕಾರ್ಯಕ್ರಮದಲ್ಲಿ ತೋರಿಸಿಕೊಟ್ಟು ರಾಜಕಾರಣಿಗಳಿಗೆ ಮಾದರಿಯಾದ ಸಂತೋಷ ಲಾಡ್
ಧಾರವಾಡ –
ಸಾಮಾನ್ಯವಾಗಿ ಯಾರಿಗಾದರೂ ಅಧಿಕಾರ ಅಂತಸ್ತು ಬಂತೆಂದರೆ ಸಾಕು ಯಾರೇ ಎದುರಿಗೆ ಬಂದರೂ ಯಾರೇ ಇದ್ದರೂ ಕಂಡು ಕಾಣದಂತೆ ಕೆಲವರು ವರ್ತನೆ ಮಾಡುತ್ತಾರೆ ತೋರಿಸಿಕೊಳ್ಳುತ್ತಾರೆ.ಆದರೆ ಸಂತೋಷ ಲಾಡ್ ಮಾತ್ರ ಇದಕ್ಕೆ ವಿಭಿನ್ನ ಅಧಿಕಾರ ಇದ್ದರೂ ಆಯಿತು ಅಧಿಕಾರ ಇಲ್ಲದಿದ್ದರೂ ಆಯಿತು ಯಾವಾಗಲೂ ಸರಳ ಸಜ್ಜನಿಕೆ ಎಂಬೊದನ್ನು ಪದೇ ಪದೇ ತೋರಿಸಿಕೊಳ್ಳುತ್ತಾರೆ ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಜೆಎಸ್ ಎಸ್ ಕಾಲೇಜ್ ನಲ್ಲಿ ಕಂಡು ಬಂದ ಚಿತ್ರಣ.ಜೆಎಸ್ ಎಸ್ ಶಿಕ್ಷಣ ಸಂಸ್ಥೆ 50 ವರ್ಷ ಗಳನ್ನು ಪೊರೈಸಿದ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಒಂದು ಸಮಾರಂಭಕ್ಕೆ ವಿವಿಧ ಗಣ್ಯರು ಕೂಡಾ ಆಗಮಿಸಿದ್ದರು ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮಾಜಿ ಶಾಸಕ ಹಿರಿಯ ರಾಜಕಾರಣಿ ಸರಳ ಸಜ್ಜನಿಕೆಯ ರಾಜಕಾರಣಿಗಳಾದ ಚಂದ್ರಕಾಂತ ಬೆಲ್ಲದ ಮಾಜಿ ಸಂಸದರಾದ ಐ ಜಿ ಸನದಿ ಅವರುಗಳು ವೇದಿಕೆಯ ಕೆಳಗಡೆ ಕುಳಿತುಕೊಂಡಿದ್ದರು ಇದನ್ನು ಗಮನಿಸಿದ ಸಚಿವ ಸಂತೋಷ ಲಾಡ್ ವೇದಿಕೆಯ ಮೇಲಿಂದ ಅವರನ್ನು ನೋಡಿ ಕೆಳಗಡೆ ಇಳಿದು ಬಂದರು.ಕೆಳಗಡೆ ಇಳಿದು ಬರುತ್ತಿದ್ದಂತೆ ಅತ್ತ ನಿರೂಪಕರು ಕೂಡಾ ಇಬ್ಬರು ಗಣ್ಯರು ವೇದಿಕೆಗೆ ಬರುವಂತೆ ಆಮಂತ್ರಣ ನೀಡಿದರು ಕೂಡಲೇ ಸಂತೋಷ ಲಾಡ್ ಇಬ್ಬರು ಗಣ್ಯರ ಕಾಲುಗಳಿಗೆ ನಮಸ್ಕಾರವನ್ನು ಮಾಡಿ ಬರಮಾಡಿಕೊಂಡು ವೇದಿಕೆಗೆ ಕರೆದುಕೊಂಡು ಬಂದರು.ಧಾರವಾಡದ ಜೆಎಸ್ ಎಸ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಚಂದ್ರಕಾಂತ. ಬೆಲ್ಲದ ಅವರನ್ನು ವೇದಿಕೆಗೆ ಕರೆಯದೇ ವೇದಿಕೆಯ ಮುಂಬಾಗದಲ್ಲಿ ಕುಳಿತಿದ್ದನ್ನು ಗಮನಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ.ಲಾಡ್ ಕಾರ್ಯಕ್ರಮದ ವೇದಿಕೆಯಿಂದ ಕೆಳಗೆ ಬಂದು ಮಾಜಿ ಶಾಸಕ ಚಂದ್ರಕಾಂತ.ಬೆಲ್ಲದ ಅವರ ಕಾಲಿಗೆ ನಮಸ್ಕಾರ ಮಾಡಿ ವೇದಿಕೆಗೆ ಕರೆದುಕೊಂಡು ಹೋಗಿ ಹಿರಿಯರಿಗೆ ಕೊಡಬೇಕಾದ ಗೌರವವನ್ನು ಹೇಗೆ ಕೊಡಬೇಕು ಎಂಬೊದನ್ನು ಹಾಗೂ ತಾವೊಬ್ಬರು ಸರಳತೆಯ ಮೂರ್ತಿ ಎಂಬೊದನ್ನು ತೋರಿಸಿಕೊಟ್ಟರು.
ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವ್ಯೆರಲ್ ಆಗಿದ್ದು ಸಂತೋಷ ಲಾಡ್ ಅವರ ನಡೆಗೆ ಮೆಚ್ಚುಗೆಗಳ ಮಹಾಪೂರ ಕಂಡು ಬರುತ್ತಿದೆ..
ಉದಯ ವಾರ್ತೆ ಧಾರವಾಡ