ಹುಬ್ಬಳ್ಳಿ:- ಹುಬ್ಬಳ್ಳಿ ಟ್ರಾಪಿಕ್ ಪೋಲೀಸ ಪೇದೆಯೊಬ್ಬ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಹುಬ್ಬಳ್ಳಿಯ ನಾಥ್೯ ಪೋಲೀಸ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗಪ್ಪ ಹಂಚಿನಮನಿ (48) ಎಂಬ ಪೋಲೀಸ್ ಇಂದು ಉಣಕಲ್ ಹತ್ತಿರ ರೈಲು ಹಳಿಗೆ ಬಿದ್ದು ಸುಸೈಡ್ ಮಾಡಿಕೊಂಡಿದ್ದಾನೆ.
ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದವನಾದ ನಾಗಪ್ಪ ಹಂಚಿನಮನಿ ಹುಬ್ಬಳ್ಳಿಯಲ್ಲಿ ವಾಸವಾಗಿದ್ದು ಕಳೆದ ಹದಿನೈದು ದಿನಗಳಿಂದ ಕರ್ತವ್ಯಕ್ಕೂ ಹಾಜರಾಗದೇ ಗೈರು ಉಳಿದಿದ್ದ ಎನ್ನಲಾಗಿದೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲಾ.