ಕಾರಿನಲ್ಲಿ ಹೊರಟಿದ್ದ ನೇಹಾ ಹಿರೇಮಠ ತಂದೆಯನ್ನು ಬೆನ್ನು ಹತ್ತಿದ ಆಟೋ ಚಾಲಕ. ಕುಡಿದ ಮತ್ತಿನಲ್ಲಿ ನಿರಂಜನಗೆ ಕಿರಿಕಿರಿ. ಸಾರ್ವಜನಿಕರಿಂದ ಗೂಸಾ.
ಹುಬ್ಬಳ್ಳಿ:-ಹುಬ್ಬಳ್ಳಿಯ ಶಿರೂರ ಪಾರ್ಕ ರಸ್ತೆಯಲ್ಲಿ ಅಟೋ ಚಾಲಕನೊಬ್ಬ ನಿರಂಜನ ಹಿರೇಮಠ ಕಾರ್ ಫಾಲೋ ಮಾಡಿ ಕುಡಿದ ಅಮಲಿನಲ್ಲಿ ನೇಹಾ ತಂದೆಗೆ ಕಿರಿಕಿರಿ ಮಾಡಿದ
ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
KA 25 EE 6476 ನಂಬರ್ ನ ಆಟೋ ಚಾಲಕನಿಂದಲೇ ನಿರಂಜನಗೆ ಕಿರಿಕ್ ಆಗಿದ್ದು
ಸುಮಾರು ಒಂದು ಕಿಲೋ ಮೀಟರ್ ನೇಹಾ ತಂದೆಯನ್ನು ಫಾಲೋ ಮಾಡಿದ್ದಾನೆ ಆಟೋ ಚಾಲಕ.
ತಕ್ಷಣ ಜಾಗೃತರಾದ ನಿರಂಜನ ಹಿರೇಮಠ ಸಾರ್ವಜನಿಕರು ಇರುವ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಾರೆ.ಅಲ್ಲಿರುವ ಸಾರ್ವಜನಿಕರು ಆಟೋ ಚಾಲಕನಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.