ಅಂಜಲಿ ಕೊಲೆ ಹಿಂದೆ ಇನ್ನೂ ಆರೋಪಿಗಳಿರುವ ಶಂಕೆ.!ಸಿಐಡಿ ಡಿಜಿಗೆ ದೂರು ನೀಡಿದ ಸಮತಾ ಸೇನಾ ಕರ್ನಾಟಕ ರಾಜ್ಯಾದ್ಯಕ್ಷ.ಕಾಣದ ಕೈಗಳು ಆರೋಪಿಯ ರಕ್ಷಣೆ ಮಾಡಲಾಗುತ್ತಿದೆ ಗುರುನಾಥ ಉಳ್ಳಿಕಾಶಿ.
ಅಂಜಲಿ ಕೊಲೆ ಹಿಂದೆ ಇನ್ನೂ ಆರೋಪಿಗಳಿರುವ ಶಂಕೆ.!ಸಿಐಡಿ ಡಿಜಿಗೆ ದೂರು ನೀಡಿದ ಸಮತಾ ಸೇನಾ ಕರ್ನಾಟಕ ರಾಜ್ಯಾದ್ಯಕ್ಷ.ಕಾಣದ ಕೈಗಳು ಆರೋಪಿಯ ರಕ್ಷಣೆ ಮಾಡಲಾಗುತ್ತಿದೆ ಗುರುನಾಥ ಉಳ್ಳಿಕಾಶಿ.
ಹುಬ್ಬಳ್ಳಿ:- ಅಂಜಲಿ ಹತ್ಯೆಯ ಹಿಂದೆ ಇನ್ನೂ ಆರೋಪಿಗಳಿದ್ದಾರೆ.ಆ ಆರೋಪಿಯ ರಕ್ಚಣೆಗೆ ಮಹಾನಾಯಕನೊಬ್ಬ ನಿಂತಿದ್ದಾನೆ.ಆ ಆರೋಪಿಯ ಹೆಸರು ಹೇಳದಂತೆ ಅಂಜಲಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.ಆ ಹಿನ್ನೆಲೆಯಲ್ಲಿ ಅಂಜಲಿ ಹತ್ಯೆ ಪ್ರಕರಣ ಸಮಗ್ರ ತನಿಖೆಯಾಗಬೇಕೆಂದು ಸಮತಾ ಸೇನಾ ರಾಜ್ಯಾದ್ಯಕ್ಷ ಗುರುನಾಥ ಉಳ್ಳಿಕಾಸಿ ಸಿಐಡಿ ಡಿಜಿ ಅವರಿಗೆ ದೂರು ನೀಡಿದ್ದಾರೆ.
ಅಂಜಲಿ ಕೊಲೆಯಾದ ನಂತರ ಅಂಜಲಿ ಸಹೋದರಿ ವಿಜಯ ಎನ್ನುವವನ ಹೆಸರು ಪ್ರಕರಣದಲ್ಲಿ ಬರುತ್ತಿದ್ದಂತೆ ಮಹಾನಾಯಕ ಎನಿಸಿಕೊಂಡವರೊಬ್ಬರು ಅಂಜಲಿ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಅವನ ಹೆಸರು ಹೇಳದಂತೆ ಧಮ್ಕಿ ಹಾಕಿದ್ದಾರೆ ಎಂದು ದೂರು ನೀಡಿರುವ ಸಮತಾ ಸೇನೆ ರಾಜ್ಯಾದ್ಯಕ್ಷರು ಪ್ರಕರಣ ತನಿಖೆ ಸಮಗ್ರವಾಗಿ ನಡೆಯಬೇಕೆಂದು ಒತ್ತಾಯಿಸಿದ್ದಾರೆ.
ಆರೋಪಿಯ ರಕ್ಷಣೆಗೆ ಕಾಣದ ಕೈಗಳು ಆಟವಾಡತಿವೆ.ಸಿಐಡಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಹತ್ಯೆಯಾದ ಅಂಜಲಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಸಮತಾ ಸೇನಾ ರಾಜ್ಯಾದ್ಯಕ್ಷ ಗುರುನಾಥ ಉಳ್ಳಿಕಾಸಿ ದೂರು ನೀಡಿದ್ದಾರೆ.