ಮಗನ ನೋಡಲು ಬಂದ್ರೆ ಕೆಳಗೆ ಹಾಕಿ ಹೊಡೆದ ಪುಂಡರು. ಕಿಮ್ಸ್ ಪೊಲೀಸರೆದುರೇ ನಡೆಯಿತು ಗಲಾಟೆ.
ಹುಬ್ಬಳ್ಳಿ: ಅಪಘಾತಕ್ಕಿಡಾಗಿದ್ದ ತಮ್ಮ ಹೆತ್ತ ಮಗನ ನೋಡಲು ಪಾಲಕರು ಕಿಮ್ಸ್ ಆಸ್ಪತ್ರೆಗೆ ಬಂದ್ರೆ ಅನಾಮಿಕರು ಸೇರಿಕೊಂಡು ತಂದೆ, ತಾಯಿ, ತಮ್ಮನ ಮೇಲೆ ಹಲ್ಲೆ ಮಾಡಿರುವ ಘಟನೆ ಕಿಮ್ಸ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಬಳಿ ನಡೆದಿದೆ.
ಹೌದು,,,, ಮಹಮ್ಮದಸಾಬ್, ಸಾಹೇರಾಬಾನು ದಂಪತಿಯ ಮಗ ಟಿಪ್ಪು ಸುಲ್ತಾನ ಇತ ನಾಲ್ಕು ವರ್ಷಗಳ ಹಿಂದೆ ಮನೆಯಲ್ಲಿ ಜಗಳ ಮಾಡಿ ಮನೆ ಬಿಟ್ಟು ಧಾರವಾಡದ ಅಜ್ಜಿ ಮನೆಯಲ್ಲಿದ್ದನೆಂದು ಹೇಳಿಕೊಂಡು ತನ್ನ ಗೆಳಯನ ಮನೆಯಲ್ಲಿದ್ದನಂತೆ. ನಿನ್ನೆ ದಿನದಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಾಗ ಕಿಮ್ಸ್ ಆಸ್ಪತ್ರೆಗೆ ದಾಖಲಾದಾಗ ತಂದೆ ತಾಯಿಗೆ ವಿಷಯ ತಿಳಿದಿದೆ. ಆದ್ರೆ ಮಗನ ನೋಡಲು ಓಡಿ ಬಂದ ಪಾಲಕರಿಗೆ ಟಿಪ್ಪು ಸುಲ್ತಾನ ಗೆಳಯರು ನೀವೆಕೆ ಬಂದಿರಿ ಅಂತ ಅವರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಆದ್ರೆ ದುರಾದೃಷ್ಟಕ್ಕೆ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಪೊಲೀಸರಿದ್ರು ಏನು ಉಪಯೋಗವಿಲ್ಲ. ಏಕೆಂದ್ರೆ ಅಷ್ಟೊಂದು ಜನಾ ಸೇರಿ ಈ ವಯಸ್ಕರನ್ನು ಆತನ ತಮ್ಮನನ್ನು ಹೊಡೆಯುತ್ತಿದ್ದರು, ಜಗಳ ಬಿಡಿಸುವ ಗೋಜಿಗೂ ಹೋಗಲಿಲ್ಲಾ.
ಇನ್ನು ಟಿಪ್ಪು ಸುಲ್ತಾನ್ ಗೆಳೆಯ ಜಹೀರ್ ಅಬ್ಬಾಸ್ ಅತ್ತಾರ ಹಾಗೂ ತಾಯಿ ರೇಹನಾ ಖಾಜಾ ಅತ್ತಾರ ಇವರುಗಳು ಆತನನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಕೆಲಸಕ್ಕೆ ಕಳಸುತ್ತಿದ್ದರಂತೆ. ಆತ ನಿಮ್ಮ ಮಗಾ ಅಲ್ಲಾ ನಮ್ಮ ಜೊತೆ ಇದ್ದಾನೆ. ಇಲ್ಲೆ ಏಕೆ ಬಂದ್ರಿ ಅಂತ ರೌಡಿಗಳನ್ನು ಕರೆಯಿಸಿ ಅವರ ಮೇಲೆ ಹಲ್ಲೆ ಮಾಡಿದ್ದಾರಂತೆ ಹಾಗಂತ ವಿದ್ಯಾನಗರ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.