ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ KSFC ಡೆಪ್ಯುಟಿ ಮ್ಯಾನೇಜರ್.ಲೋನಗಾಗಿ ಹಣ ಪಡೆಯುವಾಗ ಲೋಕಾಯುಕ್ತ ರೇಡ್.
ಧಾರವಾಡ:-ಧಾರವಾಡ ರಾಯಾಪೂರದ ಬಳಿ ಇರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿರುವ ರಮೇಶ ಎಂಬುವವರು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಮೂಲದ ಪ್ರವೀಣ ಮಾಳಗಿ ಎಂಬುವವರು ವಾಹನ ಸಾಲಕ್ಕೆ ಅರ್ಜಿ ಹಾಕಿದ್ದರು.ಅದಕ್ಕೆ ಸಂಬಂಧಿಸಿದಂತೆ ರಮೇಶ ಅವರು ಲೀಗಲ್ ಓಪಿನಿಯನ್ ಕೊಡಬೇಕಾಗಿತ್ತು.ಲೀಗಲ್ ಓಪಿನಿಯನ್ ಕೊಡಲು ಎಂಟು ಸಾವಿರ ರೂ ಡಿಮ್ಯಾಂಡ್ ಮಾಡಿದ್ದರು.
ಡಿಮಾಂಡ್ ಮಾಡಿದ ಹಣವನ್ನು ಕೊಡುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.