ಸಚಿವ ಪ್ರಹ್ಲಾದ ಜೋಶಿಗೆ ಸನ್ಮಾನ.ಯುವ ಮುಖಂಡ ಅನೂಪಕುಮಾರ ಬಿಜವಾಡ ಅವರಿಂದ ಸಚಿವರಿಗೆ ಸನ್ಮಾನ.
ಹುಬ್ಬಳ್ಳಿ:- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸತತ ಐದನೇ ಬಾರಿಗೆ ಗೆಲವು ಸಾಧಿಸಲು ಹಗಲಿರುಳು ಪ್ರಯತ್ನ ಮಾಡಿದ್ದ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಅನೂಪಕುಮಾರ ಬಿಜವಾಡ ಆ್ಯಂಡ್ ಟೀಮ್ ಸಂಸದ ಪ್ರಹ್ಲಾದ ಜೋಶಿ ಅವರನ್ನು ಸನ್ಮಾನಿಸಿದರು.
ಚುನಾವಣೆ ಆರಂಭಕ್ಕೂ ಮುನ್ನ ಪ್ರಹ್ಲಾದ ಜೋಶಿ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದ ಯುವ ಮುಖಂಡ ಅನೂಪಕುಮಾರ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿ ಜೋಶಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಆ ಹಿನ್ನೆಲೆಯಲ್ಲಿ ಇಂದು ಜೋಶಿ ಗೆಲುವಿನ ಗುರಿ ಮುಟ್ಟುದ್ದಿದ್ದಂತೆ ಅನೂಪಕುಮಾರ ತಮ್ಮ ಟೀಮಿನೊಂದಿಗೆ ತರಳಿ ಸನ್ಮಾನ ಮಾಡಿದರು.
ಅದಕ್ಕೂ ಮೊದಲು ಜೋಶಿ ಅವರು ಗೆಲ್ಲುತ್ತಿದ್ದಂತೆ ಅನೂಪಕುಮಾರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.