ಶಿಷ್ಯನ ಕ್ಷೇತ್ರದಲ್ಲಿಯೇ ಗುರುವಿಗೆ ಮೈನಸ್.ಗೌಡರ ಹಿಂದಿನ ದಂಡು ಕೆಲಸ ಮಾಡಲಿಲ್ವಾ..?ಮಾತಿನಲ್ಲೇ ಮಣೆ ಹಾಕಿದ ಗೌಡರ ದಂಡು..
ಹುಬ್ಬಳ್ಳಿ:- ಧಾರವಾಡ ಲೋಕಸಭಾ ಕ್ಷೇತ್ರದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಂ.ಆರ್ ಪಾಟೀಲರು ತಮ್ಮ ಚುನಾವಣೆಯಲ್ಲಿ ತೆಗೆದುಕೊಂಡಷ್ಟು ಓಟ್ ಪ್ರಹ್ಲಾದ ಜೋಶಿ ಅವರಿಗೆ ಹಾಕಿಸಲು ಆಗಲಿಲ್ಲಾ.2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 76105 ಮತಗಳು ಬಂದಿದ್ದವು.ಆದರೆ ಈಗ 75544 ಮತಗಳು ಬಂದಿವೆ.
ಕೇಂದ್ರ ಸಚಿವರು ತಮ್ಮ ಶಿಷ್ಯ ಎಂ ಆರ್ ಪಿ ಅವರ ಕ್ಷೇತ್ರದಲ್ಲಿ ಕನಿಷ್ಟ ಅಂದರೂ ಹದಿನೈದರಿಂದ ಇಪ್ಪತ್ತು ಸಾವಿರ ಬಿಜೆಪಿಗೆ ಲೀಡ್ ಬರಬಹುದು ಎಂದು ಕೊಂಡಿದ್ದರು.ಆದರೆ ನೆಚ್ಚಿದ ಎಮ್ಮೆ ಕೋಣ ಇಳಿಯಿತು ಅಂದಂಗಾಯ್ತು ಕುಂದಗೋಳ ಕಥೆ.ಜೋಶಿ ಅವರು ಎಂಆರ್ ಅವರನ್ನು ನಂಬಿದರೆ ಎಂಆರ್ ಅವರು ಅವರ ದಂಡು ನಂಬಿ ಕೆಟ್ಟರು ಅನ್ನೋ ಹಾಗೆ ಆಗಿದೆ.
ಮಾತಿನಲ್ಲೇ ಮಣೆ ಹಾಕುವ ಎಂಆರ್ ಅವರ ದಂಡು, ಕ್ಷೇತ್ರದಲ್ಲಿ ಹೋಗಿ ಜೋಶಿ ಅವರ ಪರ ಮತ ಹಾಕುವಂತೆ ಪರಿ ಪರಿಯಾಗಿ ಕೇಳಿಕೊಂಡಿದ್ದನ್ನ ಒಮ್ಮೆ ವಿಚಾರಿಸಿದರೆ ಗೊತ್ತಾಗುತ್ತೆ ದಂಡಿನ ಚುನಾವಣಾ ಹಕೀಕತ್ತು.