ಹುಬ್ಬಳ್ಳಿ: ಕಳೆದ ಎರಡು ದಿನದ ಹಿಂದೆ ಹುಬ್ಬಳ್ಳಿಯ ಹೊಸೂರ ಬಳಿ ಕಿರಾಣಿ ಸ್ಟೋರ್ದಲ್ಲಿ ಗಾಂಜಾ ಇಟ್ಟಿರುವ ಪ್ರಕರಣಕ್ಕೆ ಇಂದು ಟ್ವಿಸ್ಟ್ ಸಿಕ್ಕಿದೆ. ಕಿರಾಣಿ ಅಂಗಡಿಯಲ್ಲಿ ಗಾಂಜಾ ಇಟ್ಟು ಪರಾರಿಯಾಗಿದ್ದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು,,,, ಕಿರಾಣಿ ಅಂಗಡಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಚಂದ್ರು ಅಣ್ಣೀಗೇರಿ ಜೀವನ ಹಾಳು ಮಾಡಬೇಕೆಂದು ಪ್ಲ್ಯಾನ್ ಮಾಡಿ, ಗಾಂಜಾ ಕೇಸ್ದಲ್ಲ ಫಿಟ್ ಮಾಡಲು ನೋಡಿದ್ದಾರೆ. ಆದ್ರೆ ಪೊಲೀಸರು ಅದನ್ನು ಎಳೆ ಎಳೆಯಾಗಿ ತನಿಖೆ ಮಾಡಿದ ನಂತರ ಸಂಜಯ ಪಾಟೀಲ್ ಎಂಬಾತ ಎರಡು ದಿನಗಳ ಹಿಂದೆ ಅಂಗಡಿಗೆ ಬಂದಂಗೆ ಮಾಡಿ, ಗಾಂಜಾ ಇಟ್ಟು ಪರಾರಿಯಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಧ್ಯ ವಿದ್ಯಾನಗರ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಇನ್ನು ಕೇಶ್ವಾಪೂರ ಪೊಲೀಸರು ಮಾಹಿತಿ ಮೇರೆಗೆ ಈ ಕಿರಾಣಿ ಸ್ಟೋರ್ಗೆ ಹೋಗಿದ್ದಾರೆ. ಆದ್ರೆ ಆ ಗಾಂಜಾ ಅಲ್ಲೆ ಇದೆ ಎಂಬುದು ಅವರಿಗೆ ಹೇಗೆ ಗೊತ್ತು. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದು ಹೀಗೆ..
https://youtu.be/ErQO5JytP9k?si=nNumSdGmpnREJi1P
ಇನ್ನು ಕಿರಾಣಿ ಸ್ಟೋರ್ದಲ್ಲಿ ಸಂಜಯ ಪಾಟೀಲ್ ಗಾಂಜಾ ಇಟ್ಟು ಹೋಗಿದ್ದು ಯಾಕೆ..? ಆತನ ಹಿಂದೆ ಯಾರಿದ್ದಾರೆ. ಈ ಕೆಲಸ ಮಾಡಲು ಯಾರು ಹೇಳಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಏನೆ ಆಗಲಿ ಅಮಾಯಕರಿಗೆ ಈ ರೀತಿ ತೊಂದರೆಯಾಗುತ್ತಿರುವುದನ್ನು ಪೊಲೀಸರು ಕೂಲಂಕುಷವಾಗಿ ತನಿಖೆ ಮಾಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕಿದೆ.