ಕಂಡವರ ಪಾಲಾಗುತ್ತಿವೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳು.ಗೊತ್ತಿದ್ದು ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತ ಕಾಪೋರೇಟರಗಳು ಹಾಗೂ ಅಧಿಕಾರಿಗಳು.

Share to all

ಕಂಡವರ ಪಾಲಾಗುತ್ತಿವೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳು.ಗೊತ್ತಿದ್ದು ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತ ಕಾಪೋರೇಟರಗಳು ಹಾಗೂ ಅಧಿಕಾರಿಗಳು.

ಹುಬ್ಬಳ್ಳಿ:- ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆದಂತೆ ಭೂಮಿಯ ಬೆಲೆಗೆ ಬಂಗಾರದ ದರ ಬರುತ್ತಿದೆ.ಆ ಹಿನ್ನೆಲೆಯಲ್ಲಿ ಕಂಡ ಕಂಡ ಜಮೀನಿಗೆ ಕನ್ನ ಹಾಕುವ ಖದೀಮರಿಗೇನು ಕಮ್ಮಿಯಿಲ್ಲಾ.

ಇದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಳಿಯ ಆನಂದ ನಗರದಲ್ಲಿರುವ ಸರ್ವೇ ನಂಬರ 82/1+2 ಅ ರಲ್ಲಿ ಶರತ್ತುಗಳಿಗೆ ಒಳಪಟ್ಟು 2000 ನೇ ಇಸ್ವಿಯಲ್ಲಿ 77 ಪ್ಲಾಟುಗಳು ಆಗಿದ್ದವು.ಆ ಪ್ಲಾಟುಗಳಿಗೆ ಸರಿದೂಗುವಂತೆ ಕಾನೂನಿ ಪ್ರಕಾರ 4 ಗುಂಟ 15 ಆಣೆ ಜಾಗವನ್ನು ಲ್ಯಾಂಡ್ ಬ್ಯಾಂಕ ಹಾಗೂ ಉದ್ಯಾನವನಕ್ಕೆ ಮೀಸಲಿಟ್ಟಿದ್ದರು.ಆ ಜಾಗೆಯನ್ನು ಮಹಾನಗರ ಪಾಲಿಕೆಯ ಹೆಸರಿನಲ್ಲಿ ಇದೆ.

ಹೀಗಿದ್ದಾಗೂ ಸಹ ಕೆಲ ಜನರು ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ಕಬಳಿಸಿ,ಆ ಜಾಗೆಯಲ್ಲಿ ಕಲ್ಲು ಹಾಕಿ ಕಬ್ಜಾ ಪಡೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ.ಪಾಲಿಕೆಗೆ ಸೇರಿದ ಆಸ್ತಿಯನ್ನು ಕಂಡವರು ಕಬಳಿಸಿದರು ಪಾಲಿಕೆಯ ಜನಪ್ರತಿನಿಧಿಗಳು ಮಾತ್ರ ಗಪ್ಪ್ ಚುಪ್ಪ್ ಆಗಿರುವುದು ಸಾರ್ವಜನಿಕರಲ್ಲಿ ಸಂಶಯ ಮೂಡುವಂತಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಖಡಕ್ ಕಮೀಷನರ್ ಡಾ: ಈಶ್ವರ ಉಳ್ಳಾಗಡ್ಡಿ ಅವರು ಪಾಲಿಕೆಯ ಆಸ್ತಿಯ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದು.ಇಂತಹ ಭೂಗಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮಕೈಕೊಳ್ಳತಾರಾ ಕಾದು ನೋಡ ಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author