ಗರ್ಲ್ ಫ್ರೆಂಡ್ ವಿಚಾರ ಯುವಕನ ಮೇಲೆ ಮನ ಬಂದಂತೆ ಹಲ್ಲೆ.ಬಾಯಲ್ಲಿ ಹಲ್ಲು ಮುರಿಯವವರೆಗೆ ಥಳಿಸಿದ ಪುಂಡರು.
ಹುಬ್ಬಳ್ಳಿ: ಗರ್ಲ್ ಫ್ರೆಂಡ್ ವಿಚಾರಕ್ಕೆ ಯುವಕನೊಬ್ಬನನ್ನು ಕರೆಯಿಸಿ ಮನ ಬಂದಂತೆ ಹಲ್ಲೆ ಮಾಡಿದ ಘಟನೆ, ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಮದನಿ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಹೌದು ಸಯಿದ್ ಅನ್ವರ ಹಲ್ಲೆಗೊಳಗಾದ ಯುವಕ, ಹುಡುಗಿ ವಿಚಾರಕ್ಕೆ ಮೂವರ ಗುಂಪೊಂದು ಆತನನ್ನು ಕರೆದುಕೊಂಡು ಹೋಗಿ ಪಂಚ್ ನಿಂದ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ಇದರಿಂದ ಅನ್ವರಗೆ ತುಂಬಾ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಫಜಲ್, ಸೈಪ್ ಧಾರವಾಡ, ಜಾವಿದ್ ಪಂಚಮಹಾಲ್ದಾರ ಈ ಮೂವರು ಆತನ ಮೇಲೆ ಹಲ್ಲೆ ಮಾಡಿದ್ದಾರಂತೆ. ಈ ಘಟನೆ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.