ಪಾಲಿಕೆಯ ಬೂಗಳ್ಳರಿಗೆ ಮೂಗುದಾರ ಹಾಕಿದ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ.ಉದಯ ವಾರ್ತೆ ಸುದ್ದಿಗೆ ಪ್ರಸಾರವಾದ 24 ಘಂಟೆಯಲ್ಲಿ ಬಿತ್ತು ಬೋಡ್೯.
ಹುಬ್ಬಳ್ಳಿ:-ಹುಬ್ಬಳ್ಳಿಯ ಆನಂದ ನಗರದಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ಕಬಳಿಸಿದ್ದರ ಕುರಿತು ನಿನ್ನೆ ಉದಯ ವಾರ್ತೆ ಸುದ್ದಿ ಪ್ರಸಾರ ಮಾಡಿತ್ತು.ಉದಯ ವಾರ್ತೆಗೆ ಸ್ಪಂದಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ ಅವರು ಪಾಲಿಕೆಯ ಆಸ್ತಿಗೆ ಬೋಡ್೯ ಜಡಿದು ಪಾಲಿಕೆಯ ಆಸ್ತಿ ಕಬಳಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ ಆಸ್ತಿ ಹಾಗೂ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ಕಬಳಿಸಿದರೆ ಹಾಗೂ ಕಬಳಿಸುವ ಪ್ರಯತ್ನಕ್ಕೆ ಮುಂದಾದರೆ ಅಂತವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳುವ ಜೊತೆಗೆ ಕ್ರಿಮಿನಲ್ ಕೇಸ್ ದಾಖಲು ಮಾಡುವ ಖಡಕ್ ಸಂದೇಶ ನೀಡಿದ್ದಾರೆ.
ಆನಂದ ನಗರದ ಸರ್ವೇ ನಂಬರ 82/1+2 ಅ ರಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಅದಕ್ಕೆ ತಂತಿ ಬೇಲಿ ಹಾಕಿದ್ದರು. ಅದನ್ನು ಉದಯ ವಾರ್ತೆ ವರದಿ ಮಾಡಿತ್ತು.ಉದಯ ವಾರ್ತೆಯ ವರದಿಗೆ ಕಮೀಷನರ್ ಸ್ಪಂದಿಸಿದ್ದು ಪಾಲಿಕೆಯ ಆಸ್ತಿಗೆ ಬೋಡ್೯ ಹಾಕಿದ್ದಾರೆ.