ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಇಂಜನೀಯರೊಬ್ಬರ ನಿರ್ಲಕ್ಷ್ಯ ಪಾಲಿಕೆಯ ಆಸ್ತಿ ಬೇರೊಬ್ಬರ ಪಾಲಾಗುವ ಭೀತಿ.

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಇಂಜನೀಯರೊಬ್ಬರ ನಿರ್ಲಕ್ಷ್ಯ ಪಾಲಿಕೆಯ ಆಸ್ತಿ ಬೇರೊಬ್ಬರ ಪಾಲಾಗುವ ಭೀತಿ.

ಹುಬ್ಬಳ್ಳಿ:- ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜೋನಲ್ 4 ರ ಗಾಮನಗಟ್ಟಿ ಸರ್ವೇ ನಂಬರ 356 ರಲ್ಲಿ ಪಾಲಿಕೆಯ ಆಸ್ತಿ ತಮ್ಮದೆಂದು ರವೀಂದ್ರ ಎಂಬುವರು ವಲಯ ಕಛೇರಿ ನಾಲ್ಕಕ್ಕೆ ಹನ್ನೆರಡು ಬಾರೀ ಪತ್ರ ಬರೆದಿದ್ದರೂ ವಲಯ ಕಛೇರಿ ನಾಲ್ಕರ ಜೆಇ ಮೇಡಂ ಡೋಂಟ್ ಕೇರ್ ಅನ್ನೋ ತರಹ ನಡೆದು ಕೊಂಡಿದ್ದಾರಂತೆ ಅದಕ್ಕೆ ದಾಖಲೆಗಳೇ ಸಾಕ್ಷಿ.

 

ಜೆಇ ಮೇಡಂ ನಿರ್ಲಕ್ಷ್ಯದಿಂದ ಇಂದು ಪಾಲಿಕೆಯ ಆಸ್ತಿ ಬೇರೊಬ್ಬರ ಪಾಲಾಗುವ ಕಾಲ ದೂರ ಇಲ್ಲಾ ಅಂತಾನೇ ಹೇಳಬಹುದು.ರವೀಂದ್ರ ಎನ್ನೋವರು ಹನ್ನೆರಡು ಬಾರೀ ಪತ್ರ ವ್ಯವಹಾರ ಮಾಡಿದ ದಾಖಲೆಯನ್ನೂ ಸಹ ದಿನಾಂಕ ನಮೂದು ಮಾಡಿ ಪಾಲಿಕೆಯ ಕಮೀಷನರ ಸಾಹೇಬರಿಗೂ ಕಳಿಸಿದ್ದಾರೆ.ಹನ್ನೆರಡು ಬಾರೀ ವಲಯ ಕಛೇರಿಗೆ ಪತ್ರ ಬರೆದರೂ ಜೆಇ ಮೇಡಂ ಸುಮ್ಮನಿದ್ದಾರೆಂದರೆ ಅದು ಅವರ ನಿರ್ಲಕ್ಷ್ಯವೋ ಅಥವಾ ಆಸ್ತಿ ನನ್ನದು ಎಂದು ಹೇಳುವ ವ್ಯಕ್ತಿಗೆ ನ್ಯಾಯಾಲಯಕ್ಕೆ ಹೋಗಲು ಅನುಕೂಲ ಮಾಡಿಕೊಡಲು ಹೀಗೆ ಮಾಡಿದರಾ ಅನ್ನೋ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಅಷ್ಟೇ ಅಲ್ಲದೆ ಈ ಜೆಇ ಮೇಡಂ ಪಾಲಿಕೆಯ ಜೆಇ ನಾ ಅಥವಾ ಬೇರೊಬ್ಬರ ಅಣತಿಯಂತೆ ನಡೆದುಕೊಳ್ಳುವ ಜೆಇ ನಾ ಅಂತಾ ಅಲ್ಲಿಯ ಜನರೇ ಮಾತಾಡಿಕೊಳ್ಳತಿದ್ದಾರೆ.

ಈ ಜೆಇ ಮೇಡಂ ಅವರ ನಿರ್ಲಕ್ಷ್ಯ ಒಂದಾ ಎರಡಾ ಹೇಳತಾ ಹೋದರೆ ಸಾಕಷ್ಟಿವೆ.ಪಾಲಿಕೆಯ ಆಸ್ತಿ ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಹೀಗೆ ಮೌನವಹಿಸಿದರೆ ಸರಕಾರದ ಆಸ್ತಿ ಕಾಪಾಡುವವರು ಯಾರು?ಕಮೀಷನರ್ ಸಾಹೇಬರು ಈ ಜೆಇ ಮೇಡಂಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳದಿದ್ದರೆ ಪಾಲಿಕೆಯ ಆಸ್ತಿ ಪರರ ಪಾಲಾಗುವುದು ಗ್ಯಾರಂಟಿ ಅಂತಾ ಗಾಮನಗಟ್ಟಿ ಜನರೇ ಮಾತಾಡಿಕೊಳ್ಳತಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author