ಇಂದು ಧಾರವಾಡ ಜಿಲ್ಲೆಗೆ ಬರ ಅದ್ಯಯನ ತಂಡ.ಕೇಂದ್ರ ಕ್ರಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವ.
ಹುಬ್ಬಳ್ಳಿ:-ಐದು ಜನ ಸದಸ್ಯರನ್ನೊಳಗೊಂಡ ಕೇಂದ್ರದ ಬರ ಅದ್ಯಯನ ತಂಡ ಇಂದು ಧಾರವಾಡ ಜಿಲ್ಲೆಗೆ ಆಗಮಿಸಲಿದೆ.ಇಂದು ಮದ್ಯಾಹ್ನ 3-30ಕ್ಕೆ ಜಿಲ್ಲೆಗೆ ಆಗಮಿಸಲಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಜಿಲ್ಲೆಗೆ ಆಗಮಿಸಲಿರುವ ತಂಡದಲ್ಲಿ ಬೇರೇ ಅಧಿಕಾರಿಗಳು ಇರಲಿದ್ದಾರೆ ಅವರೆಲ್ಲಾ ಜಿಲ್ಲೆಯ ಬೆಳೆಹಾನಿ ಕುರಿತಂತೆ ಸಮಗ್ರ ಮಾಹಿತಿ ನೀಡಲಿದ್ದಾರೆ.
ಕೇಂದ್ರ ತಂಡ ಜಿಲ್ಲೆಯ ಹಾರೋಬೆಳವಡಿ,ಅಮ್ಮಿನಬಾವಿ,ಮರೇವಾಡ,ಗ್ರಾಮಗಳ ವ್ಯಾಪ್ತಿಯ ಜಮೀನಿಗಳಲ್ಲಿ ಹತ್ತಿ,ಗೋವಿನ ಜೋಳ,ಈರುಳ್ಳಿ,ಮೆಣಸಿನಕಾಯಿ, ಸೊಯಾಬಿನ್ ಬೆಳೆಗಳ ಹಾನಿ ಪರಿಶೀಲನೆ ನಡೆಸಲಿದ್ದಾರೆ.ಅದರ ಜೊತೆಗೆ ನರೇಗಾ ಯೋಜನೆಯ ಕಾಮಗಾರಿಗಳನ್ನೂ ಸಹ ವೀಕ್ಷಣೆ ಮಾಡಲಿದ್ದಾರೆ .
ಕೇಂದ್ರ ತಂಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಾಲಿನ ಮಳೆಯ ವಾಸ್ತವ ಪರಿಸ್ಥಿತಿ, ಬಿತ್ತನೆ,ಬೆಳೆ ಹಾನಿ ಹಾಗೂ ಇಳುವರಿ ಕುಸಿತದ ಬಗ್ಗೆ ಕೇಂದ್ರ ಅದ್ಯಯನ ತಂಡಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ
9448334896