ಹುಬ್ಬಳ್ಳಿ ಗಾಂಜಾ ಪ್ರಕರಣ. ಗಾಂಜಾ ಇಟ್ಟ ವ್ಯಕ್ತಿ ಬಂಧನ ಆಯಿತು. ಕಿರಾಣಿ ಅಂಗಡಿಯಲ್ಲಿ ಗಾಂಜಾ ಇಡಲು ಹೇಳಿದ ಆ ವ್ಯಕ್ತಿ ಆರೆಸ್ಟ್ ಯಾಕಿಲ್ಲಾ..?
ಹುಬ್ಬಳ್ಳಿ: ಕಳೆದ ಆರು ದಿನಗಳ ಹಿಂದೆ ಹುಬ್ಬಳ್ಳಿಯ ಹೊಸೂರ ಬಳಿ ಕಿರಾಣಿ ಸ್ಟೋರ್‌ದಲ್ಲಿ ಗಾಂಜಾ ಇಟ್ಟಿರುವ ಪ್ರಕರಣದಲ್ಲಿ ಗಾಂಜಾ ಇಟ್ಟವನನ್ನ ಆರೆಸ್ಟ್ ಆಯಿತು.ಅಲ್ಲಿ ಗಾಂಜಾ ಇಡಲು ಹೇಳಿದ ವ್ಯಕ್ತಿ ಆರೆಸ್ಟ್ ಯಾಕೆ ಮಾಡಿಲ್ಲಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಹೊಸೂರಿನ ಕಿರಾಣಿ ಅಂಗಡಿಯಲ್ಲಿ ಗಾಂಜಾ ಇಟ್ಟು ಪರಾರಿಯಾಗಿದ್ದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಆ ಆರೋಪಿ ಸಹ ನನಗೆ ಕಿರಾಣಿ ಅಂಗಡಿಯಲ್ಲಿ ಗಾಂಜಾ ಇಡಲು ಹೇಳಿದ್ದರು ಎಂದು ಪೋಲೀಸರ ಎದುರಿಗೆ ಹೇಳಿದ್ದಾನ ಅಂತೆ.ಹಾಗಾದರೂ ಪೋಲೀಸರು ಆ ವ್ಯಕ್ತಿ ಆರೆಸ್ಟ್ ಮಾಡಲು ಹಿಂದೆ ಮುಂದೆ ಯಾಕೆ ಮಾಡತಿದ್ದಾರೆ.
ಈ ಪ್ರಕರಣದಲ್ಲಿ ಗಾಂಜಾ ಇಡಲು ಹೇಳಿದವನನ್ನು ಆರೆಸ್ಟ್ ಮಾಡಿದರೆ ತಮ್ಮ ವ್ಯಾಪ್ತಿ ಬಿಟ್ಟು ಬೇರೊಂದು ಠಾಣೆಯ ವ್ಯಾಪ್ತಿಯಲ್ಲಿ ರೇಡ್ ಗೆ ಹೋಗಿರುವ ಕೇಶ್ವಾಪುರ ಪೋಲೀಸರ ಬಂಡವಾಳವೂ ಹೊರಬೀಳುತ್ತೆ ಅಂತಾ ಹೊಸೂರಿನ ಜನರೇ ಮಾತಾಡಿಕೊಳ್ಳತಿದ್ದಾರೆ.