ಶಿವಮೊಗ್ಗ ಗಲಾಟೆ ವಿಚಾರ ರಾಜ್ಯ ಸರ್ಕಾರದ ತುಷ್ಠೀಕರಣ ರಾಜಕಾರಣದ ಪರಮಾವದಿ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

Share to all

ಹುಬ್ಬಳ್ಳಿ

ಶಿವಮೊಗ್ಗ ಗಲಾಟೆ ವಿಚಾರ ರಾಜ್ಯ ಸರ್ಕಾರದ ತುಷ್ಠೀಕರಣ ರಾಜಕಾರಣದ ಪರಮಾವದಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.ಶಿವಮೊಗ್ಗ ಗಲಾಟೆಯನ್ನ ರಾಜ್ಯ ಸರ್ಕಾರ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ.ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ.
ತುಷ್ಢೀಕರಣ ಕಾರಣದಿಂದ ಮತಾಂಧ ಶಕ್ತಿಗಳಿಗೆ ರಕ್ಷಣೆ ಇದೆ ಅನ್ನೋ ಮನೋಭಾವನೆ ಇದೆ.
ಕಾಂಗ್ರೆಸ್ ಸರ್ಕಾರದಿಂದ ನಮಗೆ ರಕ್ಷಣೆ ಇದೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿ ಇಷ್ಟೊಂದು ರೀತಿಯ ದೊಡ್ಡ ಪ್ರಮಾಣದ ಗಲಾಟೆಯಾದ್ರೂ ಸಹ ಅದರ ಬಗ್ಗೆ ಉಡಾಫೆ ಉತ್ತರ ವ್ಯಕ್ತವಾಗುತ್ತಿವೆ.ಹಳೇ ಹುಬ್ಬಳ್ಳಿ ವಿಚಾರದಲ್ಲೂ ಪೊಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ಪೊಲೀಸರು ಮತ್ತು ಜನರ ಹತ್ಯೆಯಾಗುತ್ತಿತ್ತು.
ಹಳೇ ಹುಬ್ಬಳ್ಳಿ ಗಲಾಟೆ ವಿಚಾರದಲ್ಲೂ ಸಾಕಷ್ಟು ಗಲಭೆ ದೊಂಬಿ ನಡೆದಿದೆ.ಆದ್ರೆ ಇಂತಹ ಗಲಭೆ ನಡೆಸಿದವರ ಕೇಸ್ ವಾಪಸ್ ತೆಗೆದುಕೊಳ್ಳಲು ಸರ್ಕಾರ ಮುಂದಾಗುತ್ತಿದೆ.
ತುಷ್ಠೀಕರಣದ ರಾಜಕಾರಣ ಪರಾಕಾಷ್ಠೆಯನ್ನ ಕಾಂಗ್ರೆಸ್ ತಲುಪಿದೆ.ಕಾಂಗ್ರೆಸ್ಸಿಗರು ಕೇವಲ ಅಲ್ಪಸಂಖ್ಯಾತರು ಮತ ಹಾಕಿಲ್ಲ ಅನ್ನೋದು ನೆನಪಿನಲ್ಲಿಟ್ಟುಕೊಳ್ಳಲಿ.
ದೇಶದ್ರೋಹಿಗಳ,ಗಲಭೆಕೋರರ ಪರ ನಿಲ್ಲೋದನ್ನ‌ ನಾವು ತೀವ್ರವಾಗಿ ಖಂಡಿಸುತ್ತೇವೆ.
ಪಾಕಿಸ್ತಾನ್ ಜಿಂದಾಬಾದ್ ಅಂತ ಘೋಷಣೆ ಕೂಗುವವರನ್ನ ತಲ್ವಾರ್ ಹಿಡಿದು ಬೆದರಿಕೆ ಹಾಕೋರನ್ನ ರಕ್ಷಣೆ ಮಾಡಲು ಹೊರಟಿದ್ದಾರೆ
ಪಾಕಿಸ್ತಾನಿ ಭಯೋತ್ಪಾದಕರ ಪರವಾಗಿ ನಿಲ್ಲೋಕೆ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ ಎಂದು ಜೋಶಿ ಕಿಡಿಕಾರಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ

ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು‌ಇದು ನಡೆಯಲ್ಲ

ಈ ಬಗ್ಗೆನಾವು ತೀವ್ರ ಹೋರಾಟ ನಡೆಸುತ್ತೇವೆ ಕಾಂಗ್ರೆಸ್ಸಿಗರು ಎಚ್ಚರಿಕೆಯಿಂದಿರಬೇಕು

ಕಾಂಗ್ರೆಸ್ ನಲ್ಲಿ ಲಿಂಗಾಯತ ಲಡಾಯಿ ವಿಚಾರ

ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ

ಈ‌ಬಗ್ಗೆ ಶಾಮನೂರು ಶಿವಶಂಕರಪ್ಪ‌ ಅವರೇ ಸ್ಪಷ್ಟಪಡಿಸಿದ್ದಾರೆ ನಾವೇನೂ ಜಾಸ್ತಿ ಹೇಳಲ್ಲ

ಪಿಎಫ್ ಐ ಗೆ ಬೆಂಬಲ‌ ಸೂಚಿಸುವುದು ಕಾಂಗ್ರೆಸ್ ನ ಪಾಲಸಿ

ಪಿಎಫ್ ಐ ಸೇರಿದಂತೆ ದೇಶದ್ರೋಹಿಗಳಿಗೆ ಪ್ರೋತ್ಸಾಹ ನೀಡುವಂತ ಪಕ್ಷವಾಗಿ ಕಾಂಗ್ರೆಸ್ ಪರಿವರ್ತನೆ ಹೊಂದುತ್ತಿದೆ

ಧಾರವಾಡ ಜಿಲ್ಲೆಗೆ ಉಗ್ರರ ನಂಟು ವಿಚಾರ

ಈ ವಿಚಾರದಲ್ಲಿ ಗೃಹ ಇಲಾಖೆ ದೆಹಲಿ ಪೊಲೀಸರ ಜೊತೆ ಸಂಪರ್ಕ‌ ಮಾಡುವ ಮೂಲಕ ಸೂಕ್ತ ತನಿಖೆ ನಡೆಸಬೇಕು

ಕಾಂಗ್ರೆಸ್ ಸರ್ಕಾರ ಈ ರೀತಿ ದೇಶದ್ರೋಹಿ ಕೆಲಸ ಮಾಡುವವರ ಪ್ರಕರಣ ಹಿಂತೆಗೆದುಕೊಂಡರೆ ಈ ರೀತಿ ಉಗ್ರರ ತಾಣವಾಗೋದು‌ ಸಹಜ


Share to all

You May Also Like

More From Author