ಬಳ್ಳಾರಿಯಲ್ಲಿ ಸಚಿವ ಸಂತೋಷ ಲಾಡ್ ಗೆ ಭರ್ಜರಿ ಸ್ವಾಗತ – ಮೊದಲ ಬಾರಿಗೆ ಬಂದ ಸಚಿವರಿಗೆ ಗಜಮಾಲೆ ಹಾಕಿ ವೆಲ್ ಕಮ್ ಮಾಡಿದ ಅಭಿಮಾನಿಗಳು
ಬಳ್ಳಾರಿ –
ಮೊದಲ ಬಾರಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಬಳ್ಳಾರಿ ಗೆ ಆಗಮಿಸಿದ್ದಾರೆ.ನಗರಕ್ಕೆ ಆಗಮಿಸುತ್ತಿದ್ದಂತೆ ಇತ್ತ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಅದ್ದೂರಿಯಾದ ಸ್ವಾಗತವನ್ನು ಕೋರಲಾಯಿತು.ನಗರದ ಎಸ್ಪಿ ಸರ್ಕಲ್ ನಲ್ಲಿ ಗಜಮಾಲೆ ಹಾಕಿ ಸ್ವಾಗತವನ್ನು ಕೋರಿದರು. ಕಾರ್ಮಿಕ ಸಚಿವನಾದ ಬಳಿಕ ಮೊದಲ ಬಾರಿ ಬಳ್ಳಾರಿಗೆ ಭೇಟಿ ನೀಡಿದ್ದಾರೆ.ತಮ್ಮ ಖಾತೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳುವ ಸಲುವಾಗಿ ಬಳ್ಳಾರಿಗೆ ಆಗಮಿಸಿದ್ದಾರೆ.ಇನ್ನೂ ಇದೇ ವೇಳೆ ಶಾಮನೂರು ಶಿವಶಂಕ್ರಪ್ಪ ಹೇಳಿಕೆ ಕುರಿತಂತೆ ಮಾತಾನಾಡಿ ನಮ್ಮ ಸರ್ಕಾರದ ಹಿರಿಯ ಶಾಸಕರಾದ ಶಾಮನೂರು ಶಿವಶಂಕ್ರಪ್ಪ ಅವರು ಯಾವ ಉದ್ದೇಶಕಾಗಿ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ.ಅವರು ನೀಡಿರುವ ಹೇಳಿಕೆಯಂತೆ ಪ್ರಸ್ಥುತ ನಮ್ಮಲ್ಲಿ ಇಲ್ಲ ಅವರು ಹೇಳಿಕೆಯನ್ನು ನೀಡಬಾರದಿತ್ತು.ಸರ್ವರನ್ನು ಒಳಗೊಂಡ ಸಚಿವ ಸಂಪುಟ ನಮ್ಮ ಸರ್ಕಾರದ್ದು.ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆ ನಮ್ಮ ಸರ್ಕಾರದಿಂದ ಇಲ್ಲ ಎಂದರು ಇನ್ನೂ ಸಿ.ಪಿ.ಯೋಗೀಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸಂಕ್ರಾಂತಿ ವೇಳೆಗೆ ನಮ್ಮ ಸರ್ಕಾರ ಬೀಳುವುದಿಲ್ಲ. ಯೋಗೀಶ್ ಹಗಲು ಗನಸು ಕಾಣುತ್ತಿದ್ದಾರೆ.೫ ವರ್ಷಗಳ ಕಾಲ ಕರ್ನಾಟಕ್ಕೆ ಸುಭದ್ರ ಆಡಳಿತ ಕಾಂಗ್ರೇಸ್ ಸರ್ಕಾರ ನೀಡಲಿದೆ.ಆದರೆ ಬಿಜೆಪಿಯವರು ಮುಂದಿನ ದಿನಗಳಲ್ಲಿ ಎಲ್ಲಿ ಅಧಿಕಾರದಲ್ಲಿ ಇರುವುದಿಲ್ಲವೆಂದರು.ಇನ್ನೂ 2024 ಕ್ಕೆ ಬಿಜೆಪಿ ಮುಕ್ತ ಭಾರತವಾಗುವುದು ಗ್ಯಾರಂಟಿ ಎಂದರು.ಕಾಂಗ್ರೇಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದ ಕಾರ್ಮಿಕ ಸಚಿವ ಸಂತೋಷ ಲಾಡ್.
ಉದಯ ವಾರ್ತೆ ಬಳ್ಳಾರಿ