ಗಾಂಜಾ ಕಿಂಗ್ ಪಿನ್ ಗಳ ಹೆಡಮುರಿ ಕಟ್ಟಿದ ಬೆಂಡಿಗೇರಿ ಪೋಲೀಸರು. ಮೂರು ಕೆಜಿ ಗಾಂಜಾ.. ಮೂವರ ಬಂಧನ.
ಹುಬ್ಬಳ್ಳಿ:- ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಕಿಂಗ್ ಪಿನ್ ಗಳನ್ನು ಬೆಂಡಿಗೇರಿ ಪೋಲೀಸರು ಬಂಧಿಸಿ ಬಂಧಿತರಿಂದ ಮೂರು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು ತೋಶಿಪ್,ಶೇಖರ್,ಮುಬಾರಕ ಎಂದು ಗುರುತಿಸಲಾಗಿದೆ.
ಅನುಮಾನಾಸ್ಪದವಾಗಿ ಮಂಟೂರ ರಸ್ತೆಯ ರೇಲ್ವೇ ಗೇಟ್ ಬಳಿ ತಿರುಗಾಡುತ್ತಿದ್ದ ಮೂವರನ್ನು ಬೆನ್ನತ್ತಿದ ಪೋಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಆಯ್ ಅಲಿಶೇಖ ಹಾಗೂ ಪಿಎಸ್ ಐ ಶರಣ ದೇಸಾಯಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನಮಂತ..ಅಂಬಿಗೇರ..,ಸೋಮು,.ರಾಮು,.ಬಸು ದಾಳಿಯಲ್ಲಿ ಭಾಗವಹಿಸಿದ್ದರು.