ಅಂತರ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನ ಬಂಧಿಸಿದ ಅಶೋಕ ನಗರ ಪೋಲೀಸರು.ಐದು ಬೈಕ್ ವಶ.

Share to all

ಅಂತರ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನ ಬಂಧಿಸಿದ ಅಶೋಕ ನಗರ ಪೋಲೀಸರು….ಐದು ಬೈಕ್ ವಶ.

ಹುಬ್ಬಳ್ಳಿ:- ಜನ ನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ ಬೈಕಗಳನ್ನು ಕ್ಷಣ ಮಾತ್ರದಲ್ಲಿ ಎಗರಿಸಿ ಪರಾರಿಯಾಗುತ್ತಿದ್ದ ಚಾಲಾಕಿ ಬೈಕ್ ಕಳ್ಳನನ್ನು ಹುಬ್ಬಳ್ಳಿಯ ಅಶೋಕ ನಗರ ಪೋಲೀಸರು ಹೆಡಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಯನ್ನು ಗುಮ್ಮಗೋಳ ಗ್ರಾಮದ ಮೈಲಾರೆಪ್ಪ ಹನಮಂತಪ್ಪ ಗುರಿಕಾರ ಎಂದು ಗುರುತಿಸಲಾಗಿದ್ದು.ಈತ ಹುಬ್ಬಳ್ಳಿಯ ಗೋಪನಕೊಪ್ಪ ಬಳಿ ನಂಬರ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾಗ ಪೋಲೀಸರ ಕೈಗೆ ಸಿಕ್ಕಾಕಿಕೊಂಡಿದ್ದಾನೆ.

ಪೋಲೀಸರ ಬಲೆಗೆ ಬಿದ್ದ ಆರೋಪಿ ಮೈಲಾರೆಪ್ಪನ ಮೇಲೆ ಸಂಶಯ ಬಂದಾಗ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಆತ ಬೈಕ್ ಕಳ್ಳ ಎಂದು ಗೊತ್ತಾಗಿದೆ.ನಂತರ ಎಲ್ಲೆಲ್ಲಿ ಬೈಕ್ ಕಳ್ಳತನ ಮಾಡಿದ್ದಾನೆ.ಹಾಗೂ ಕಳ್ಳತನ ಮಾಡಿದ ಬೈಕ್ ಗಳನ್ನು ಎಲ್ಲೆಲ್ಲಿ ಮಾರಿದ್ದ ಅವೆಲ್ಲವನ್ನೂ ಅಶೋಕ ನಗರ ಕ್ರೈಂ ಟೀಂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಪಿಆಯ್ ಕಿರಣಕುಮಾರ ತಾವರಗೇರಿ ನೇತೃತ್ವದಲ್ಲಿ ಪಿಎಸ್ಆಯ್ ಮಂಜುನಾಥ ಎಂ ಟಿ ಹಾಗೂ ಸಿಬ್ಬಂದಿಗಳಾದ S.H.ಪಾಟೀಲ,ಪಮ್ಮಾರ,ರಾಜೇಶ,ಸುಧಾಕರ ಗಣಪತಿ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author