ಬೊಮ್ಮಾಯಿ,ಪ್ರಹ್ಲಾದ್ ಜೋಶಿ ಹಾಗೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತೇವಿ.ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ತೇವಿ ಅಂತಾ ಬಸನಗೌಡ ಪಾಟೀಲ ಯತ್ನಾಳ

Share to all

ಹಾವೇರಿ

ಬೊಮ್ಮಾಯಿ,ಪ್ರಹ್ಲಾದ್ ಜೋಶಿ ಹಾಗೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತೇವಿ.ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ತೇವಿ ಅಂತಾ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.ಹಾವೇರಿಯಲ್ಲಿ ಮಾತನಾಡಿದ ಅವರು
ಇಲ್ಲಿಂದಲೆ ನಿಮಗೆಲ್ಲಾ ಶಪಥ ಸಂದೇಶ ಕೊಡತೇವಿ.ಲೋಕಸಭಾ ಚುನಾವಣೆ ಬಳಿಕ ಈ ಸರ್ಕಾರ ಇರಲ್ಲ ಬಿಜೆಪಿ ಗೆಲ್ಲೋದೇ, ನಾವು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರ್ತೇವೆ.ಲೋಕಸಭಾ ಚುನಾವಣೆ ಬಳಿಕ ಈ ಕಾಂಗ್ರೆಸ್ ಸರ್ಕಾರ ಇರಲ್ಲ.ನೈತಿಕ ಹೊಣೆ ಹೊತ್ತು ರಾಜೀನಾಮೆ, ಸಿಎಂ ರಿಂದ ರಾಜ್ಯಪಾಲದ ಭೇಟಿ ಅಂತ ಬರುತ್ತೆ ನೋಡತಾ ಇರಿ.
ಈ ಸರ್ಕಾರ ಡಂ ಅನ್ನುತ್ತೆ.
ನಾವೆಲ್ಲಾ ಜಾತಿಯವರು ಸೇರಿ ಗಣೇಶನ್ನ ಕೂರಿಸಿದ್ದೇವೆ.
ಆದರೆ ಸಾಬರು ಎಲ್ಲರೂ ಒಂದಾಗಿ ಕಾಂಗ್ರೆಸ್ ಗೆ ಮತ ಹಾಕ್ತಾರೆ ಅಂದರೆ ನೀವು ಹಿಂದೂಗಳೆಲ್ಲಾ ಒಂದಾಗಿ ಬಿಜೆಪಿಗೆ ಓಟ್ ಹಾಕಬೇಕಲ್ಲಾ.
ದುಡ್ಡು ತಗೊರಿ, ಇವರು ಈಗ ಬಹಳ ದುಡ್ಡು ಮಾಡಿದಾರೆ
ಆದರೆ ಓಟ್ ಮಾತ್ರ ಬಿಜೆಪಿಗೆ ಹಾಕಿ.ಕುಮಾರಣ್ಣನಿಗೆ ಮೊದಲೇ ಹೇಳಿದೆ.ಸಾಬರು ನನ್ನ ಹೃದಯದಲ್ಲಿದ್ದಾರೆ ಎಂದು ಕುಮಾರಣ್ಣ ಹೇಳಿದ್ರು.
ಅದಕ್ಕೆ ನಾನು ಬಹಳ ಸಲ ಹೇಳಿದ್ದೆ.ಸಾಬರನ್ನು ನಂಬಬೇಡಿ ಅಂದಿದ್ದೆ.ಇವರು ಅವರ ಜೊತೆ ಸೇರಿ ನಮಾಜ್ ಮಾಡಿದರು
ಆದರೆ ನಮಾಜ್ ಮಾಡಿದ್ದು ಏನಾಯಿತು?ಆದರೆ ಚುನಾವಣೆಯಲ್ಲಿ ಕುಮಾರಣ್ಣನ ಮಗನನ್ನೇ ಸೋಲಿಸಿದರು
ಇದನ್ನ ಹೇಳಿದಾಗ, ಹೌದು ಬ್ರದರ್ ಅಂತ ಅಂದರು.
ಈಗ ಕುಮಾರಣ್ಣ ಕೂಡಾ ನಮ್ಮ ಜೊತೆ ಇದ್ದಾರೆ ಎಂದು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಉದಯ ವಾರ್ತೆ ಹಾವೇರಿ.


Share to all

You May Also Like

More From Author