ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಕನಸು ನನಸು.ನವಲಗುಂದ ಬೈಪಾಸ್ ಗೆ 350 ಕೋಟಿ.ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಅಭಿನಂದನೆ ಸಲ್ಲಿಸಿದ ಎಸ್ ಬಿಎಂ.

Share to all

ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಕನಸು ನನಸು.ನವಲಗುಂದ ಬೈಪಾಸ್ ಗೆ 350 ಕೋಟಿ.ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಅಭಿನಂದನೆ ಸಲ್ಲಿಸಿದ ಎಸ್ ಬಿಎಂ.

ಹುಬ್ಬಳ್ಳಿ: ತಮ್ಮ ಕ್ಷೇತ್ರದ ಪ್ರಮುಖ ಪಟ್ಟಣಕ್ಕೆ ಬೈಪಾಸ್ ಮಾಡಿಸಬೇಕೆಂಬ ಕನಸು ನನಸಾಗುತ್ತಿರುವುದಕ್ಕೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

22.06.2022 ರಂದು ನವದೆಹಲಿಯಲ್ಲಿ ನಡೆಸಿದ ಸಭೆಯ ಪರಿಣಾಮ ಇಂದು ಕೇಂದ್ರದ ಬಿಜೆಪಿ ಸರಕಾರ 350 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದೆ.

ನವಲಗುಂದ ಪಟ್ಟಣದ ಎಡಭಾಗದಿಂದ ಬೈಪಾಸ್ ಮಾಡಲು ಅಧಿಕಾರಿಗಳು ಮೊದಲು ಡಿಪಿಆರ್ ಮಾಡಿದ್ದರು. ಇದನ್ನೇ ಮಾಡಿದ್ದರೇ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಅದೇ ಕಾರಣದಿಂದ ನಮ್ಮ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಜೊತೆಗೆ ಚರ್ಚಿಸಿ, ಬಲಭಾಗದಿಂದ ಬೈಪಾಸ್ ನಿರ್ಮಾಣ ಮಾಡಲು ಕೇಂದ್ರದ ಗಮನ ಸೆಳೆಯಲಾಗಿತ್ತು. ಈ ಸಂದರ್ಭದಲ್ಲಿ ಪ್ರಲ್ಹಾದ ಜೋಶಿಯವರ ಪ್ರಯತ್ನವೂ ಸಾಕಷ್ಟಿದೆ.

ತಾವು ಸಚಿವರಿದ್ದ ಸಮಯದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನವಲಗುಂದ ಬೈಪಾಸ್‌ನ ವಿಸ್ತ್ರತ ವರದಿಯನ್ನ ನೀಡಿ, ಪಟ್ಟಣದ ಅಭಿವೃದ್ಧಿಗೆ ಪೂರಕವಾಗಬೇಕೆಂದು ಮುನೇನಕೊಪ್ಪ ಅವರು ಕೇಳಿಕೊಂಡಿದ್ದರು.

ಇದೀಗ ಕೇಂದ್ರ ಸರಕಾರ ಬೈಪಾಸ್‌ಗೆ ಹಣ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಲ್ಹಾದ ಜೋಶಿಯವರಿಗೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಉದಯ ವಾರ್ತೆ


Share to all

You May Also Like

More From Author