ಜೈಲಿನಲ್ಲಿ ಪತಿ ದರ್ಶನ..ಪತಿಯ ಬಿಡುಗಡೆಗೆ ದೇವರ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ..
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಒಳಿತಿಗಾಗಿ ಪತ್ನಿ ವಿಜಯಲಕ್ಷ್ಮಿ ನ್ಯಾಯಾಲಯದ ಹೋರಾಟದ ಜೊತೆಗೆ ದೇವರ ಬಳಿಯೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳಿದ ಅವರು ಪತಿಯ ಒಳಿತಿಗಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ.
ದರ್ಶನ್ ಜೈಲು ಪಾಲಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಜೂನ್ 11 ಕ್ಕೆ ಬಂಧನವಾದ ನಟ ದರ್ಶನ್ಗೆ ಕನಿಷ್ಟ ಇನ್ನೂ ಎರಡು-ಮೂರು ತಿಂಗಳು ಜಾಮೀನು ಸಿಗಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಈ ಹಿನ್ನಲೆ ದೇವರ ಮೊರೆ ಹೋದ ವಿಜಯಲಕ್ಷ್ಮಿ ದೇವರಿಗೆ ಮೊರೆ ಇಟ್ಟಿದ್ದು, ಪತಿಯನ್ನು ಸಂಕಷ್ಟಗಳಿಂದ ಪಾರು ಮಾಡುವಂತೆ ಬೇಡಿಕೊಂಡಿದ್ದಾರೆ .
ದರ್ಶನ್ ಗೆ ಸದ್ಯ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅಲ್ಲಿವರೆಗೆ ದರ್ಶನ್ ಪರಪ್ಪನ ಅಗ್ರಹಾರವೇ ಗತಿಯಾಗಿದೆ.