ಡೇಂಜರ್ ಡೆಂಘೀಗೆ ಐದು ವರ್ಷದ ಕಂದಮ್ಮ ಸಾವು. ಮಹಾಮಾರಿ ಅರ್ಭಟಿಸುತ್ತಿದೆ ಎಚ್ಚರ ಎಚ್ಚರ..ಡೆಡ್ಲಿ ಡೇಂಘೀ ಹುಷಾರ್..
ಗದಗ:-ಡೆಡ್ಲಿ ಡೆಂಘಿಗೆ ಐದು ವರ್ಷದ ಕಂದಮ್ಮ ಚಿರಾಯಿ ಹೊಸಮನಿ ಬಲಿಯಾದ ಘಟನೆ ಗದಗ ಜಿಲ್ಲೆಯ ಗದಗ ತಾಲೂಕಿನ ಶಿರುಂಜ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಚಿರಾಯಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಗದಗ ಜಿಲ್ಲೆಯಲ್ಲಿ ಡೆಂಘೀಗೆ ಬಲಿಯಾದ ಮೊದಲ ಬಾಲಕ ಎನ್ನಲಾಗಿದೆ.ಆ ಹಿನ್ನೆಲೆಯಲ್ಲಿ ಜನರು ಮುಂಜಾಗ್ರತಾ ಕ್ರಮ ಕೈಕೊಳ್ಳುವಂತೆ ಜಿಲ್ಲಾಡಳಿತ ಸೂಚಿನೆ.