ಅರಣ್ಯಾಧಿಕಾರಿಗಳ ಕೌನ್ಸಲಿಂಗ್ ವರ್ಗಾವಣೆಯ ಸಮಾಲೊಚನೆಯ ಸಮಯದಲ್ಲಿ ಬಾರಿ ಗೋಲ್ ಮಾಲ್…!!! ಉಸ್ತುವಾರಿ ಸಚಿವರ ಕೈಗೊಂಬೆಯಾದರಾ ಉನ್ನತ ಅಧಿಕಾರಿಗಳು..!!!

Share to all

ಅರಣ್ಯಾಧಿಕಾರಿಗಳ ಕೌನ್ಸಲಿಂಗ್ ವರ್ಗಾವಣೆಯ ಸಮಾಲೊಚನೆಯ ಸಮಯದಲ್ಲಿ ಬಾರಿ ಗೋಲ್ ಮಾಲ್…!!! ಉಸ್ತುವಾರಿ ಸಚಿವರ ಕೈಗೊಂಬೆಯಾದರಾ ಉನ್ನತ ಅಧಿಕಾರಿಗಳು..!!!

ಹುಬ್ಬಳ್ಳಿ:-ಹೌದು ಕರ್ನಾಟಕ ಅರಣ್ಯ ಇಲಾಖೆಯ ಕೆನರಾ ಅರಣ್ಯ ವ್ರತ್ತದ ಮುಂಚೂಣಿ ಸಿಬ್ಬಂದಿಗಳಾದ ಗಸ್ತು ಅರಣ್ಯ ಪಾಲಕರು ಹಾಗೂ ಉಪ ವಲಯ ಉನ್ನತ ಅಧಿಕಾರಿಗಳು ವರ್ಗಾವಣೆ ದಂದೆಗೆ ಇಳಿದರಾ ಅಥವಾ ಉಸ್ತುವಾರಿ ಸಚಿವರ ಕೈಗೊಂಬೆಯಾದರಾ ಅನ್ನೋ ಪ್ರಶ್ನೆ ಈಗ ಕಾಡತಾ ಇದೆ..!!!!

2023-24 ನೇ ಸಾಲಿನ ಅರಣ್ಯ ಇಲಾಖೆಯ ಕೆಳ ವರ್ಗದ ಗಸ್ತು ಅರಣ್ಯ ಪಾಲಕರು ಹಾಗೂ ಉಪ ವಲಯ ಅರಣ್ಯಾಧಿಕಾರಿಗಳ ಕೌನ್ಸಲಿಂಗ್ ವರ್ಗಾವಣೆಗೆ ಆದೇಶ ಮಾಡಿ ಶನಿವಾರ ದಿನಾಂಕ 06/07/2024 ರಂದು ಅರಣ್ಯ ಭವನದಲ್ಲಿ ನಡೆದ ಸಿಬ್ಬಂದಿಗಳ ವರ್ಗಾವಣೆ ಆಪ್ತ ಸಮಾಲೋಚನೆ ಮುಖಾಂತರ ವರ್ಗಾವಣೆ ಸ್ಥಳಗಳನ್ನು ಆಯ್ಕೆ ಮಾಡಲು ಅವಕಾಶ ನಿಡಲಾಗಿತ್ತು. ಈ ಮೋದಲೇ ವರ್ಗಾವಣೆ ಅರ್ಜಿ ಸಲ್ಲಿಸುವಾಗ ಮೂರು ಸ್ಥಳಗಳ ಆಯ್ಕೆ ಮಾಡಲು ಅವಕಾಶ ನಿಡಿದ್ದರು.

ಆದರೆ ಆಪ್ತ ಸಮಾಲೊಚನೆಯಲ್ಲಿ ಸಮಯದಲ್ಲಿ ಕೆಲವೊಬ್ಬ ಸಿಬ್ಬಂದಿಗಳಿಗೆ ಕಾನೂನಿನಲ್ಲಿ ಅವಕಾಶ ಇದ್ದರೂ ಸಹಿತ ಮಾನ್ಯ ಮುಖ್ಯ್ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ವ್ರತ್ತ ರವರು ವೈಯಕ್ತಿಕ ಆಸಕ್ತಿ ವಹಿಸಿಯೋ ಅಥವಾ ಉಸ್ತುವಾರಿ ಸಚಿವರ ಆದೇಶಕ್ಕೊ ಮಣಿದು ಕೆಲವು ಆಯಕಟ್ಟಿನ ಹುದ್ದೆಗಳ ಸ್ಥಳಗಳನ್ನು ನೀಡದೇ ಇಲ್ಲೆ ಮಾಡಬೇಕು ಎಂದು ಸಿಬ್ಬಂದಿಯವರಿಗೆ ಹೆದರಿಸಿ ಗದರಿಸಿ ಅವರ ಅಧಿಕಾರಿಯ ಇಚ್ಚೆಯಂತೆ ಒಲ್ಲದ ಮನಸ್ಸಿನಲ್ಲಿ ಸಮಾಲೊಚನೆಯಲ್ಲಿ ಬಾಗವಹಿಸಿ ಸ್ಥಳ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕೆಲವೊಬ್ಬ ಹೆಸರು ಹೆಳಲು ಇಚ್ಚಿಸದ ಸಿಬ್ಬಂದಿಯವರು ತಮ್ಮ ಅಳಲನ್ನು ಉದಯ ವಾರ್ತೆಯೊಂದಿಗೆ ತೋಡಿಕೊಂಡಿದ್ದಾರೆ. ದ್ವನಿ ಎತ್ತಿದರೇ ಎಲ್ಲಿ ವೈಯಕ್ತಿಕವಾಗಿ ತೊಂದರೆ ಕೊಡುತ್ತಾರೆ ಎಂದು ಹೇದರಿ ತುಟಿಕ್ ಪಿಟಿಕ್ ಎನ್ನದೆ ಬಂದಿದ್ದಾರೆ. ಅದರಲ್ಲಿ ಪ್ರಶ್ನೆ ಮಾಡಿದ ಸಿಬ್ಬಂದಿಯವರಿಗೆ ನ್ಯಾಯಾಲಯಕ್ಕೆ ಹೋಗಿ ಎಂದು ಉತ್ತರಿಸಿದ್ದು ಇದೆ ಎಂಬುದು ಸಿಬ್ಬಂದಿಯವರ ಅಳಲು.

ಕಾಂಗ್ರೆಸ್ ಸರಕಾರ 2016 ರಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗಳ ನಿಯಂತ್ರಣ ಕಾಯ್ದೆ ಮತ್ತು ನಿಯಮಾವಳಿ 2019ರ ರನ್ವಯ ವರ್ಗಾವಣೆಯಲ್ಲಿ ಪಾರದರ್ಶಕತೆ ಇರಲಿ ಎಂದು ಹಾಗೂ ಎಲ್ಲಾ ಹುದ್ದೆಗಳಲ್ಲಿ ಎಲ್ಲರೂ ಕೆಲಸ ನಿರ್ವಹಿಸುವಂತಾಗಲಿ ಎಂದು ಕಾಯ್ದೆ ರಚಿಸಿದ್ದು.

ಆದರೆ ಕಾಯ್ದೆ ಮತ್ತು ಕಾನೂನುಗಳನ್ನು ಗಾಳಿಗೆ ತೂರಿ ಅಧಿಕಾರಿಯವರಿಂದಲೇ ಈರೀತಿ ಆಗುತ್ತಿದೆ ಎಂಬುದು ಸಿಬ್ಬಂದಿಯವರ ಕಣ್ಣಿರು.

ಕೆನರಾ ವ್ರತ್ತ ಹೊನ್ನಾವರ ವಿಭಾಗ ಉಸ್ತುವಾರಿ ಸಚಿವರ ಕ್ಷೇತ್ರವಾಗಿದ್ದು ತಮ್ಮ ಕ್ಷೇತ್ರಕ್ಕೆ ತಮಗೆ ಬೇಕಾದ ಸಿಬ್ಬಂದಿಯವರನ್ನು ಆಯಕಟ್ಟಿನ ಸ್ಥಳಗಳಿಗೆ ನಿಯೋಜಿಸಲು ವೃತ್ತ ಮಟ್ಟದ ಸಮಾಲೋಚನೆ ಸಮಯದಲ್ಲಿ ಅವಕಾಶವಿದ್ದರೂ ಸಹಿತ ಕೆನರಾ ವ್ರತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಆಯಕಟ್ಟಿನ ಹುದ್ದೆಗಳನ್ನು ತಮಗೆ ಬೇಕಾದ ಸಿಬ್ಬಂದಿಗಳಿಗೆ ಹಾಗೂ ಸಚಿವರಿಗೆ ಬೇಕಾದವರಿಗೆ ಸ್ಥಳ ನಿಯುಕ್ತಿ ಮಾಡಲು ಸ್ಥಳಗಳನ್ನು ವಿಭಾಗ ಮಟ್ಟದ ಸಮಾಲೋಚನೆಯಲ್ಲಿ ಹಂಚಿಕೆ ಮಾಡಲು ಕಾಯ್ದಿರಿಸಿದ್ದಾರೆಯೇ ಎಂಬ ಅನುಮಾನ. ಆಯ್ಕೆ ಮಾಡಲು ಅವಕಾಶ ನಿಡದೇ ಇರುವ ಸಿಬ್ಬಂದಿಯವರಿಗೆ ಬಂದಿದೆ.

ಈ ಮೇಲಿನ ಎಲ್ಲಾ ಪ್ರಶ್ನೆ ಗಳಿಗೆ ಮಾನ್ಯ ಅರಣ್ಯ ಸಚಿವರು ಹಾಗೂ ಮಾನ್ಯ ಮುಖ್ಯ ಮಂತ್ರಿಯವರು ಹಾಗೂ ಅರಣ್ಯ ಇಲಾಖೆಯ ಮುಖ್ಯಸ್ಥರು ಉತ್ತರಿಸಬೇಕಾಗಿದೆ.❓

ಅರ್ಜಿ ಸಲ್ಲಿಸುವಾಗ ಆಯ್ಕೆ ಮಾಡಿದ ಹುದ್ದೆ ವ್ರತ್ತ ಮಟ್ಟದ ಸಮಾಲೊಚನೆಯಲ್ಲಿ ಅವರಿಗೆ ನೀಡದೇ ವಿಭಾಗ ಮಟ್ಟದ ವರೆಗೆ ಕಾಯ್ದಿರಿಸಿದ ಬಗ್ಗೆ ತನಿಖೆ ನಡೆದರೆ ಸತ್ಯಾಸತ್ಯತೆ ಬಯಲಿಗೆ ಬರುತ್ತದೆ ಎಂಬುದು ಸಿಬ್ಬಂದಿಯವರ ಬೇಡಿಕೆ.

ಪ್ರಭಾವ, ಲಂಚವನ್ನು ನಿಲ್ಲಿಸಲು ಮತ್ತು ಎಲ್ಲಾ ಅರಣ್ಯ ಅಧಿಕಾರಿಗಳಿಗೆ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯೊಂದಿಗೆ ಸಮಾನ ಅವಕಾಶವನ್ನು ಒದಗಿಸುವುದು ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಲು, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಅರಣ್ಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ನಿಯಂತ್ರಣ) ಕಾಯಿದೆ 2016 ಮತ್ತು ನಿಯಮಗಳು 2019 ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ. ಕೆಲವು ಪ್ರಭಾವಿ ಕೈಗಳು ರಾಜಕೀಯ ಮಾರ್ಗಗಳ ಮೂಲಕ ಅದರ ಅನುಷ್ಠಾನವನ್ನು ತಡೆಯಲು ಪ್ರಯತ್ನಿಸುತ್ತಿವೆ. ಪ್ರಾಮಾಣಿಕ ಮತ್ತು ಪ್ರಾಮಾಣಿಕ ಅಧಿಕಾರಿ ಯಾವಾಗಲೂ ಈ ಕಾಯಿದೆಯನ್ನು ಬೆಂಬಲಿಸುತ್ತಾರೆ.

ವಿಭಾಗ ಮಟ್ಟದ ಸಮಾಲೊಚನೆಯಲ್ಲಿ ತಪ್ಪು ಮಾಡುತ್ತಾರಾ ಅಥವಾ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೊಡಬೇಕಾಗಿದೆ.ಒಟ್ಟಾರೆ ನೀವು ಛಾಪೆ ಕೆಳಗೆ ನುಸುಳಿದರೇ ನಾವೂ ರಂಗೋಳಿ ಕೆಳಗೆ ನುಸುಳುತ್ತೇವೆ ಎಂಬುದು ಸರಕಾರಕ್ಕೆ ಅಧಿಕಾರಿಗಳು ದುಡ್ಡು ಹಾಗೂ ರಾಜಕೀಯ ಒತ್ತಡಕ್ಕೆ ಮಣಿಯುವ ಸಾಹಸ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author